Tue. Dec 24th, 2024

ಗೊಂಬೆ ಕೂರಿಸುವ ಸ್ಪರ್ಧೆ: ಪೋಸ್ಟರ್ ಬಿಡುಗಡೆ ಮಾಡಿದ ಸಚಿವರು

Share this with Friends

ಮೈಸೂರು: ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ನಾಡಹಬ್ಬ ಮೈಸೂರು ದಸರಾ 2024ರ ಮನೆಮನೆ ಗೊಂಬೆ ಗೊಂಬೆ ಕೂರಿಸುವ ಸ್ಪರ್ಧೆಯನ್ನು ಆಯೋಜಿಸಿದ್ದು, ಸ್ಪರ್ಧೆಯ ಪೋಸ್ಟರನ್ನು ಸಚಿವದ್ವಯರು ಬಿಡುಗಡೆ ಮಾಡಿದರು.

ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಹಾಗೂ ಶಿಕ್ಷಣ ಇಲಾಖೆ ಸಚಿವ
ಮದು ಬಂಗಾರಪ್ಪ ಅವರು ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ವೇಳೆ ಸ್ಪರ್ಧೆ ಕುರಿತು ಮಾಹಿತಿ ನೀಡಿದ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್,ಸ್ಪರ್ಧೆಯಲ್ಲಿ ಭಾಗವಹಿಸುವವರು 200 ರೂ ನೋಂದಣಿ ಶುಲ್ಕ ನೀಡಬೇಕಿದೆ ಎಂದು ತಿಳಿಸಿದರು.

ದಸರಾ ಗೊಂಬೆ ಸ್ಪರ್ಧೆಯಲ್ಲಿ
ಸಂಸ್ಕೃತಿ ಇತಿಹಾಸ ಸಾರುವ ಹಾಗೂ ಐತಿಹಾಸಿಕ ಹಿನ್ನಲೆ ಒಳಗೊಂಡಂತೆ ಗೊಂಬೆಗಳನ್ನು ಕೂರಿಸಿ ದವರಿಗೆ ಮೊದಲನೇ ಬಹುಮಾನ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ 1000 ರೂ ನಗದು ಹಾಗೂ ಪಾರಿತೋಷಕ ಮತ್ತು ಪ್ರಮಾಣಪತ್ರ ನೀಡಲಾಗುವುದು.

ಎರಡನೇ ಬಹುಮಾನ 500 ರೂ ನಗದು
ಪಾರಿತೋಷಕ ಹಾಗೂ ಪ್ರಮಾಣಪತ್ರ,ಮೂರನೇ ಬಹುಮಾನ 300ರೂ ನಗದು ಪಾರಿತೋಷಕ ನೀಡಲಾಗುವುದು ಎಂದು ಹೇಳಿದರು.

ಅಕ್ಟೋಬರ್ 13 ರ ಒಳಗೆ 8971389539 ದೂರವಾಣಿ ಸಂಖ್ಯೆಗೆ ವಾಟ್ಸ್ ಆ್ಯಪ್ ಮೂಲಕ ಗೊಂಬೆ ಜೋಡಣೆ ಮಾಡಿರುವ ಚಿತ್ರ ಹಾಗೂ 3ನಿಮಿಷದ ವೀಡಿಯೊವನ್ನು ಕಳಿಸಿಕೊಡಬೇಕು ಎಂದು ರೇಖಾ ತಿಳಿಸಿದರು.

ವಿಧಾನ ಪರಿಷತ್ ಸದಸ್ಯೆ
ಬಲ್ಕಿಷ್ ಬಾನು, ಶಾಸಕ ಜಿ.ಎಸ್ ಶ್ರೀ ನಿವಾಸ್, ವೈದ್ಯಧಿಕಾರಿಗಳಾದ
ಶ್ರೀನಿವಾಸ್ ಆಚಾರ್ಯ, ಅಶ್ವಿನಿ ಗೌಡ, ರೇಣುಕಾ ಹೊರಕೇರಿ,
ಯಶವಂತ್ ಮತ್ತಿತರರು ಹಾಜರಿದ್ದರು.


Share this with Friends

Related Post