Sat. Dec 28th, 2024

ಮರಣೋತ್ತರ ವರದಿ ತಿರುಚಲು ಹಣ ಆಫರ್ ವಿಚಾರ ತಿಳಿಯದು:ದಿನೇಶ್

Share this with Friends

ಮೈಸೂರು, ಜೂ.19: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಮ್ಮ ಇಲಾಖೆಗೆ
ಮರಣೋತ್ತರ ವರದಿ ತಿರುಚಲು ಹಣ ಆಫರ್ ಮಾಡಲಾಗಿದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಂತದ್ದೇನಾದರು ಇದ್ದರೆ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದರು.

ನಾವ್ಯಾರೂ ತನಿಖೆ ವಿಚಾರದಲ್ಲಿ ಮೂಗು ತೂರಿಸಿಲ್ಲ,ಹೀನಾಯ ರೀತಿಯಲ್ಲಿ ಕೊಲೆಯಾಗಿದೆ,ಈ ಪ್ರಕರಣದ ಬಗ್ಗೆ ಪೊಲೀಸರು ನಿಕ್ಷಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ತಪಿಸ್ಥರಿಗೆ ಶಿಕ್ಷೆಯಾಗಬೇಕು ಎಂಬುದೇ ನಮ್ಮ ಬಯಕೆ,ಪ್ರಕರಣ ಸಂಬಂಧ ಯಾವ ಅಭಿಮಾನಗಳು ಅತಿರೇಕಕ್ಕೆ ಹೋಗಬಾರದು.ಅಭಿಮಾನ ಅತಿರೇಕಕ್ಕೆ ಹೋದಾಗ ಅಸಹಿಷ್ಣುತೆ ಉಂಟಾಗುತ್ತದೆ,
ನಾನು ಹೇಳಿದ್ದು, ಸತ್ಯ ನನ್ನಂದಿಲ್ಲೇ ಎಲ್ಲಾ ಎಂಬ ಮನೋಭಾವಗಳು ಎಲ್ಲಾ ಕ್ಷೇತ್ರದಲ್ಲೂ ಬದಲಾಗಬೇಕು ಎಂದು ದಿನೇಶ್ ಗೂಂಡುರಾವ್ ತಿಳಿಸಿದರು.

ಬೇರೆ ರಾಜ್ಯಗಳಿಗ ಹೋಳಿಸಿದರೆ ನಮ್ಮ ರಾಜ್ಯದಲ್ಲಿ ಈಗಲೂ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದೆ,ಕೇಂದ್ರ ಸರ್ಕಾರ ತನಗೆ ಬರುವ ತೆರಿಗೆ ಸುಂಕವನ್ನ ಇಳಿಸದೆ ಕೇವಲ ನಮ್ಮನ್ನ ಮಾತ್ರ ತೆರಿಗೆ ಇಳಿಸಿ ಎಂದರೆ ಹೇಗೆ ಎಂದು ಬೆಲೆ ಏರಿಕೆ ಯನ್ನ ಸಚಿವರು ಸಮರ್ಥಿಸಿಕೊಂಡರು.

ಗ್ಯಾರೆಂಟಿ ಯೋಜನೆಗಾಗಿಯೇ ಬೆಲೆ ಏರಿಕೆಯಾಗಿದೆ ಎಂಬುದರಲ್ಲಿ ಅರ್ಥ ಇಲ್ಲ,
ಅಭಿವೃದ್ಧಿ ಕಾರ್ಯಗಳಿಗೆ ಹಣ ಅನಿರ್ವಾಯ, ಸಂಪನ್ಮೂಲ ಕ್ರೂಡಿಕರಣಕ್ಕಾಗಿ ಈ ರೀತಿ ಮಾಡುತ್ತಿದ್ದೇವೆ,ಗ್ಯಾರೆಂಟಿ ನಿಲ್ಲಿಸುವುದು ಪರಿಷ್ಕರಣೆ ಮಾಡುವುದು ಯಾವುದೂ ಇಲ್ಲ
ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ
ರಾಜ್ಯದಲ್ಲಿ ಸಾಕಷ್ಟು ಕಡಿವಾಣ ಹಾಕಲಾಗಿದೆ,
ಆದರೆ,ಸಂಪೂರ್ಣ ನಿಂತಿದೆ ಎಂದು ಹೇಳುವುದಿಲ್ಲ,ನಮ್ಮ ಅಧಿಕಾರಿಗಳು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ.
ಬೆಳಗಾವಿ, ಮಂಡ್ಯ ಸೇರಿದಂತೆ ಹಲವಡೆ ದಾಳಿ ಮಾಡಲಾಗಿದೆ, ಈ ಬಗ್ಗೆ ಮತ್ತೆ ಸಭೆ ನಡೆಸುತ್ತೇನೆ ಎಂದು ತಿಳಿಸಿದರು.


Share this with Friends

Related Post