Tue. Dec 24th, 2024

ಡಾ.ರಾಜ್ ಜನ್ಮದಿನ:ಕಂಠೀರವ ಸ್ಟುಡಿಯೋದಲ್ಲಿ ಜನಸಾಗರ

Share this with Friends

ಬೆಂಗಳೂರು, ಏ.24: ಇಂದು ವರನಟ ಡಾ. ರಾಜಕುಮಾರ್ ಅವರ ಜನ್ಮದಿನ, ಹಾಗಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ಜನಸಾಗರ ತುಂಬಿತ್ತು.

ಡಾಕ್ಟರ್ ರಾಜಕುಮಾರ್ ಅವರು ಕಣ್ಮರೆಯಾಗಿ ಇಷ್ಟು ವರ್ಷಗಳಾದರು ಅಭಿಮಾನಿಗಳ ಮನದಲ್ಲಿ ಅವರು ಇನ್ನೂ ಹಸಿರಾಗಿದ್ದಾರೆ.

ಹಾಗಾಗಿ ರಾಜ್ಯದ ಮೂಲೆ ಮೂಲೆಗಳಿಂದ ಇಂದು ಕೂಡ ಅಭಿಮಾನಿಗಳ ಸಾಗರವೇ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾಕ್ಟರ್ ರಾಜಕುಮಾರ್ ಭೂಮಿಗೆ ಹರಿದು ಬಂದಿತ್ತು.

ಡಾಕ್ಟರ್ ರಾಜಕುಮಾರ್ ಅವರು ಅಭಿಮಾನಿಗಳನ್ನು ಅಭಿಮಾನಿ ದೇವರುಗಳು ಎಂದೇ ಕರೆಯುತ್ತಿದ್ದರು, ತಮ್ಮ ನೆಚ್ಚಿನ ನಟನ ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸಿ ಅಭಿಮಾನಿಗಳು ಖುಷಿಪಟ್ಟರು.


Share this with Friends

Related Post