Mon. Dec 23rd, 2024

ಮಹಿಷ ದಸರಾಗೆ ಚಾಲನೆ

Share this with Friends

ಮೈಸೂರು: ಕೆಲವು ವಿರೋಧದ ನಡುವೆಯೂ ಮಹಿಷ ದಸರಾಗೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ನಗರದ ಪುರಭವನದಲ್ಲಿ ಮಹಿಷನ ಕಂಚಿನ‌ ಪುಟ್ಟ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಖ್ಯಾತ ಚಿಂತಕ ಯೋಗೇಶ್ ಮಾಸ್ಟರ್ ಚಾಲನೆ‌ ನೀಡಿ ದರು.

ಇದೇ ವೇಳೆ ಬುದ್ದ, ಅಂಬೇಡ್ಕರ್ ಮೂರ್ತಿಗಳಿಗೂ ನಮನ ಸಲ್ಲಿಸಲಾಯಿತು.

ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಕಾರ್ಯಕ್ರಮ‌ ಏರ್ಪಡಿಸಲಾಗಿತ್ತು,ಆದರೆ ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಪುರಭವನದ ಆವರಣದಲ್ಲೇ ಮಹಿಷ ದಸರಾ ಆಚರಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಬೋದಿ ದತ್ತ ಬಂತೇಜಿ, ಚಿಂತಕ ಶಿವಸುಂದರ್, ಪ್ರೊ‌.ಕೆ.ಎಸ್.ಭಗವಾನ್, ಲೇಖಕ ಸಿದ್ಧಸ್ವಾಮಿ, ಪ್ರೊ.ಪಿ.ವಿ.ನಂಜರಾಜೇ ಅರಸ್, ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದಾರೆ.


Share this with Friends

Related Post