Tue. Dec 24th, 2024

ಐಐಎಂಬಿಯ ಕ್ಯಾಂಪಸ್‌ನಲ್ಲಿ ಮಿಟ್ಟಿ ಕೆಫೆಗೆ ಚಾಲನೆ:ವಿಕಲ ಚೇತನರಿಂದ ನಿರ್ವಹಣೆ

Share this with Friends

ಬೆಂಗಳೂರು, 24. ಜು: ಐಐಎಂಬಿಯ ಕ್ಯಾಂಪಸ್‌ನಲ್ಲಿ ಎನ್‌ಎಸ್‌ಆರ್‌ಸಿಇಎಲ್ ಬೆಂಬಲಿತ ಮಿಟ್ಟಿ ಕೆಫೆಗೆ ಚಾಲನೆ ನೀಡಲಾಗಿದ್ದು,ವಿಶೇಷವೆಂದರೆ ಈ ಕೆಫೆ‌ ವಿಕಲಚೇತನರಿಂದ ನಡೆಯುತ್ತಿರುವುದು.

ಐಐಎಂ ಬೆಂಗಳೂರು ಕ್ಯಾಂಪಸ್‌ನಲ್ಲಿ ದೈಹಿಕ, ಬೌದ್ಧಿಕ ಮತ್ತು ಮಾನಸಿಕ ವಿಕಲಾಂಗತೆ ಹೊಂದಿದ ವಯಸ್ಕರಿಂದ ನಡೆಸಲ್ಪಡುತ್ತಿರುವ,ಎನ್‌ಎಸ್‌ಆರ್‌ಸಿಇಎಲ್ ಬೆಂಬಲಿತ ಮಿಟ್ಟಿ ಕೆಫೆ ಇತ್ತೀಚೆಗೆ ಪ್ರಾರಂಭಗೊಂಡಿದೆ.

35 ಕ್ಕೂ ಹೆಚ್ಚು ಮಿಟ್ಟಿ ಕೆಫೆಗಳು ರಾಷ್ಟ್ರಪತಿ ಭವನ ಮತ್ತು ಭಾರತದ ಸುಪ್ರೀಂ ಕೋರ್ಟ್ ಸೇರಿದಂತೆ ಹಲವಾರು ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ಸೇವೆ ಒದಗಿಸುತ್ತಿವೆ.

ಈ ಬಗ್ಗೆ ಐಐಎಂಬಿಯ ನಿರ್ದೇಶಕ ಪ್ರೊ. ರಿಷಿಕೇಶ್‌ ಟಿ ಕೃಷ್ಣನ್‌ ಮಾತನಾಡಿದ್ದು,ಮಿಟ್ಟಿ ಕೆಫೆಯು ದೈಹಿಕ, ಬೌದ್ಧಿಕ ಮತ್ತು ಮಾನಸಿಕ ವಿಕಲಾಂಗತೆ ಹೊಂದಿರುವ ವಯಸ್ಕರಿಗೆ ಮತ್ತು ಇತರ ದುರ್ಬಲ ಸಮುದಾಯಗಳ ವ್ಯಕ್ತಿಗಳಿಗೆ ಆರ್ಥಿಕ ಸ್ವಾತಂತ್ರ್ಯ ನೀಡುವ‌ ಗುರಿ ಹೊಂದಿದೆ ಎಂದು ತಿಳಿಸಿದರು.

ಕ್ಯಾಂಪಸ್‌ನಲ್ಲಿ ವೈವಿಧ್ಯತೆ ಮತ್ತು ಹೊಸತನವನ್ನು ಸೇರಿಸುವ ನಮ್ಮ ಬದ್ಧತೆಗೆ ಇದು ಸಾಕ್ಷಿಯಾಗಿದೆ ಎಂದು ಹೇಳಿದರು,ಈ ವೇಳೆ ವಿಕಲಚೇತನರನ್ನು ಕೈ‌ ಹಿಡಿದು ಕರೆತಂದು ಖುಷಿ ಪಟ್ಟರು.

ಮಿಟ್ಟಿ ಕೆಫೆ ಸಿಇಒ ಮತ್ತು ಸಂಸ್ಥಾಪಕಿ ಅಲಿನಾ ಅಲಂ ಮಾತನಾಡಿ,ಐಐಎಂಬಿಯಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಅವಕಾಶ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದರು.

ಇದು ಅಂಗವಿಕಲರ ಸಬಲೀಕರಣಕ್ಕೆ ಸಂದೇಶ ನೀಡುತ್ತದೆ. ಈ ಮೂಲಕ, ಸಮುದಾಯದೊಳಗೆ ಭರವಸೆ ಮತ್ತು ಸಕಾರಾತ್ಮಕತೆಯ ಸಂದೇಶವನ್ನು ಪ್ರಚಾರ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ತಿಳಿಸಿದರು.


Share this with Friends

Related Post