ಶ್ರೀರಂಗಪಟ್ಟಣ: ದಸರಾ ಉತ್ಸವಕ್ಕೂ ಬೊಂಬೆಗಳ ಪ್ರದರ್ಶನಕ್ಕೂ ಶತಮಾನಗಳ ನಂಟಿದ.
ಶ್ರೀರಂಗಪಟ್ಟಣದ ಹಳೇ ಅಂಚೆ ಕಚೇರಿ ಬೀದಿಯ ನಾಗರತ್ನಮ್ಮ ನಾರಾಯಣಭಟ್ಟ ಭವನದಲ್ಲಿ ಏರ್ಪಡಿಸಿರುವ ದಸರಾ ಬೊಂಬೆಗಳ ಪ್ರದರ್ಶನ ಜನರನ್ನು ಆಕರ್ಷಿಸುತ್ತಿದೆ.
ಪಟ್ಟಣದ ಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕ ಕೃಷ್ಣಭಟ್ ಮತ್ತು ಮಂಗಳಾ ದಂಪತಿ ಈ ಬೊಂಬೆಗಳ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.
ಸುಮಾರು 3 ಸಾವಿರಕ್ಕೂ ಹೆಚ್ಚು ಬೊಂಬೆಗಳನ್ನು ಓರಣವಾಗಿ ಜೋಡಿಸಲಾಗಿದೆ. ಮೂರು ದಿನಗಳ ಸತತ ಪರಿಶ್ರಮದಿಂದ ಬೊಂಬೆಗಳನ್ನು ಜೋಡಿಸಿದ್ದಾರೆ.
ದೇಶದ ವಿವಿಧ ರಾಜ್ಯಗಳ ಜಾನಪದ ಕಲೆಗಳನ್ನು ಮತ್ತು ಸಂಸ್ಕೃತಿಯನ್ನು ಈ ಬೊಂಬೆಗಳು ಬಿಂಬಿಸುತ್ತಿವೆ.
ದಸರಾ ಉತ್ಸವದಲ್ಲಿ ಜಂಬೂ ಸವಾರಿಯ ಮೆರವಣಿಗೆ, ಮಂಗಳ ವಾದ್ಯ, ಸಪ್ತ ಮಾತೃಕೆಯರು, ನವ ದುರ್ಗೆಯರು, ಶ್ರೀನಿವಾಸ ಕಲ್ಯಾಣ, ವೈಕುಂಠ, ಕಂಚಿ ಗರುಡೋತ್ಸವ, ಶಿವ- ಪಾರ್ವತಿ, ಲಕ್ಷ್ಮಿನಾರಾಯಣ, ವಿಷ್ಣುವಿನ ದಶಾವತಾರ ಹೀಗೆ ಅದ್ಭುತವಾದ ಪ್ರದರ್ಶನವಿದೆ
ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆ ವರೆಗೆ ಬೊಂಬೆಗಳನ್ನು ನೋಡಲು ಮುಕ್ತ ಅವಕಾಶವಿದೆ.
ಮೂವತ್ತೈದು ವರ್ಷಗಳಿಂದ ನಮ್ಮ ತಾಯಿ ದಸರಾ ಬೊಂಬೆಗಳನ್ನು ಮನೆಯಲ್ಲಿ ಕೂರಿಸುತ್ತಿದ್ದರು.ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಪ್ರತ್ಯೇಕ ಭವನದಲ್ಲಿ ದಸರಾ ಬೊಂಬೆಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ ಎಂದು ಕೃಷ್ಣಭಟ್ ಅವರು ಹೇಳಿದ್ದಾರೆ.