Mon. Dec 23rd, 2024

ದೆಹಲಿ ಎಎಪಿ ಸರ್ಕಾರದ ಮತ್ತೊಬ್ಬ ಸಚಿವನಿಗೆ ಸಂಕಷ್ಟ ಶುರು

kailash Gahlot 01
Share this with Friends

ನವದೆಹಲಿ. ಮಾ.30: ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಬಂಧನಕ್ಕೊಳಗಾದ ಬೆನ್ನಲ್ಲೇ ದೆಹಲಿ ಸಚಿವ, ಎಎಪಿ ನಾಯಕ ಕೈಲಾಶ್‌ ಗೆಹ್ಲೋಟ್‌ಗೆ ಇ.ಡಿ ಸಮನ್ಸ್‌ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಕರೆದಿದೆ. ಇ.ಡಿ ಸಮನ್ಸ್‌ ಬರುತ್ತಿದ್ದಂತೆ ಗೆಹ್ಲೋಟ್ ಅವರು ಈಗಾಗಲೇ ತನಿಖಾ ಸಂಸ್ಥೆಯ ಕಚೇರಿಯನ್ನು ತಲುಪಿದ್ದಾರೆ.

ಮದ್ಯ ನೀತಿ ಹಗರಣದಲ್ಲಿ 600 ಕೋಟಿಗೂ ಹೆಚ್ಚು ಹಣವನ್ನು ಲಂಚವಾಗಿ ಪಡೆಯಲಾಗಿದೆ. ಆ ಹಣವನ್ನು ಗೋವಾ ಮತ್ತು ಪಂಜಾಬ್‌ ಚುನಾವಣಾ ಪ್ರಚಾರಕ್ಕಾಗಿ ಬಳಸಲಾಗಿದೆ ಎಂದು ಇ.ಡಿ ತಿಳಿಸಿದೆ.

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಮ್ ಆದ್ಮಿ ಪಕ್ಷದ ಮೂವರು ಪ್ರಮುಖರನ್ನು ಬಂಧಿಸಲಾಗಿದೆ. ಎಎಪಿ ಸಂಸದ ಸಂಜಯ್ ಸಿಂಗ್ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನಕ್ಕೆ ಒಳಗಾಗಿದ್ದಾರೆ.

ಈಗ ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಕೈಲಾಶ್ ಗಹ್ಲೋಟ್ ಅವರನ್ನು ಕೇಳಲಾಗಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ಇಡಿ ಮೂಲಗಳು ತಿಳಿಸಿವೆ.


Share this with Friends

Related Post