Mon. Dec 23rd, 2024

ನಾನೇ ಈಶ್ವರಪ್ಪನವರ ಮನೆಗೆ ಹೋಗ್ತೀನಿ ಅವರೇ ಗುಂಡು ಹೊಡೆಯಲಿ : ಡಿ.ಕೆ. ಸುರೇಶ್

Eshwarappa Vs DK Suresh
Share this with Friends

ಬೆಂಗಳೂರು: ದೇಶ ವಿಭಜನೆಯ ಹೇಳಿಕೆ ಕೊಟ್ಟ ಡಿಕೆ ಸುರೇಶ್ ಹಾಗೂ ವಿನಯ್ ಕುಲಕರ್ಣಿಗೆ ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತರಬೇಕು ಎಂದು ಈಶ್ವರಪ್ಪ ಹೇಳಿಕೆಗೆ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡೀದ್ದಾರೆ. ಮಾಜಿ ಸಚಿವ ಕೆ.ಎಸ್ ಈಶ್ವರಪ್ಪನವರ ಮನೆಗೆ ನಾನೇ ಸ್ವತಃ ಹೋಗುತ್ತೇನೆ, ನನಗೆ ಅವರೇ ಗುಂಡು ಹೊಡೆಯಲಿ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

ಈ ಕುರಿತಾಗಿ ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆ ಮನಷ್ಯನ ಇತಿಹಾಸ ನಿಮಗೆಲ್ಲಾ ಗೊತ್ತಿದೆ. ಮಹಾತ್ಮಾ ಗಾಂಧಿಯವರನ್ನು ಕೊಂದ ಪಕ್ಷ ಅವರದ್ದು ಎಂದು ಕಿಡಿಕಾರಿದರು. ನಾನೊಬ್ಬ ಸಣ್ಣ ವ್ಯಕ್ತಿ, ಕನ್ನಡಿಗರ ಪರವಾಗಿ ಮಾತನಾಡಿದ್ದಕ್ಕೆ‌ ಹೀಗೆ ಹೇಳಿರಬಹುದು ಎಂದು ಇದೇ ಸಂದರ್ಭದಲ್ಲಿ ಈಶ್ವರಪ್ಪಗೆ ತಿರುಗೇಟು ನೀಡಿದರು. ಬಡವರ ಮಕ್ಕಳನ್ನು ಏಕೆ ಬಾವಿಗೆ ತಳ್ಳಬೇಕು? ಬಡವರ ಮಕ್ಕಳನ್ನ ಯಾಕೆ ರೊಚ್ಚಿಗೆ ಎಬ್ಬಿಸ್ತಿರಾ‌‌? ಎಂದು ಪ್ರಶ್ನಿಸಿದರ ಅವರು, ಪಕ್ಷದಲ್ಲಿ ಈಶ್ವರಪ್ಪ ಅವರನ್ನು ಮೂಲೆ ಗುಂಪು ಮಾಡಿದ್ದಾರೆ.ಅದಕ್ಕೆ ಈಗ ಗಮನ ಸೆಳೆಯಲು ಮಾತನಾಡಿತ್ತಿದ್ದಾರೆ ಎಂದು ಆರೋಪಿಸಿದರು.

ನನ್ನ ವಿರುದ್ಧ ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ಆಗ್ರಹಿಸಿರುವ ಈಶ್ವರಪ್ಪ ಅವರಿಗೆ ನಾನೇ ಸಮಯ ಕೊಡ್ತೀನಿ, ಒಂದು ವಾರದಲ್ಲಿ ಯಾವಾಗ ಅಂತ ಹೇಳ್ತೀನಿ ನಾನೇ ಅವರ ಮನೆಗೆ ಹೋಗುತ್ತೇನೆ ಅವರೆ ಗುಂಡು ಹೊಡೆಯಲಿ. ಎಂದು ಸವಾಲು ಹಾಕಿದರು. ಈಶ್ವರಪ್ಪ ಅವರ ಮನೆಗೆ ನಾನೇ ಹೋಗ್ತೀನಿ, ನನಗೆ ಅವರೇ ಖುದ್ದಾಗಿ ಗುಂಡು ಹೊಡಯಲಿ ಎಂದ ಸುರೇಶ್ ಅದರ ಬದಲಾಗಿ ಬೇರೆಯವರ ಬಡವರ ಮಕ್ಕಳನ್ನು ಹೇಳಿಕೆ ಮೂಲಕ ರೊಚ್ಚಿಗೆಬ್ಬಿಸುವುದು ಬೇಡ, ಬದಲಾಗಿ ಅವರೆ ಆ ಕೆಲಸ ಮಾಡಲಿ ಎಂದು ಹೇಳಿದರು.

ಇಂದು ರಾಜ್ಯಕ್ಕೆ ಅಮಿತ್ ಶಾ ಆಗಮನ, ಗರಿಗೆದರಿದ ರಾಜಕೀಯ ಚಟುವಟಿಕೆಗಳು

ದೇಶದ ವಿಭಜನೆ ಮಾಡುವ, ಭಾರತವನ್ನು ಛಿದ್ರಗೊಳಿಸುವ ಮನಸ್ಥಿತಿ ಹೊಂದಿರುವ ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವ ಕಾನೂನನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತರಬೇಕು ಎಂದು ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದ್ದರು. ದಾವಣಗೆರೆ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ್ದ ಅವರು, ಕಾಂಗ್ರೆಸ್‌ ಮುಖಂಡರಾದ ಡಿ.ಕೆ. ಸುರೇಶ್‌ ಹಾಗೂ ವಿನಯ್‌ ಕುಲಕರ್ಣಿ, ದಕ್ಷಿಣ ಭಾರತವನ್ನು ಪ್ರತ್ಯೇಕ ದೇಶ ಘೋಷಿಸಬೇಕು ಎನ್ನುತ್ತಿದ್ದಾರೆ. ಆದರೆ ದೇಶದ್ರೋಹಿಗಳ ಈ ಕನಸು ನನಸಾಗಲು ಬಿಜೆಪಿ ಎಂದೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು.


Share this with Friends

Related Post