Mon. Jan 6th, 2025

ಡಿಸಿ ಕಚೇರಿಯಲ್ಲಿ ಅಂಚೆ ಮತದಾನ ಕೇಂದ್ರ ಸ್ಥಾಪನೆ

Share this with Friends

ಮೈಸೂರು, ಏ.14: ಲೋಕಸಭಾ ಚುನಾವಣೆ ಅಗತ್ಯ ಸೇವೆ ವರ್ಗದಡಿ ಬರುವ ಗೈರು ಹಾಜರಿ ಮತದಾರರಿಗೆ ಅಂಚೆ ಮತದಾನ ಕೇಂದ್ರವನ್ನು ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೆರೆಯಲಾಗಿದೆ.

ಚುನಾವಣಾ ಕರ್ತವ್ಯನಿರತ ಮತದಾರರಿಗೆ ಅಗತ್ಯ ಸೇವೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಮತದಾರರಿಗೆ ಅಂಚೆ ಮತ ಪತ್ರ ಮೂಲಕ ಮತ ಚಲಾಯಿಸಲು ಮೈಸೂರು ಜಿಲ್ಲಾಧಿಕಾರಿಗಳ ಕಾರ್ಯಾಲಯದ ನೆಲಮಹಡಿ ಕೊಠಡಿ ಸಂಖ್ಯೆ 10 ರಲ್ಲಿ ಅಂಚೆ ಮತದಾನ ಕೇಂದ್ರ ಸ್ಥಾಪಿಸಲಾಗಿದೆ.

ಈ ಅಂಚೆ ಮತದಾನ ಕೇಂದ್ರವು ಏ.19ರಿಂದ 21ರ ವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5ರ ವರೆಗೆ ತೆರೆಯಲಾಗಿರುತ್ತದೆ.

ಅಗತ್ಯ ಸೇವೆ ವರ್ಗದಡಿ ಬರುವ ಹಾಜರಿ ಮತದಾರರು ತಮ್ಮ ಮತವನ್ನು ಅಂಚೆ ಮತ ಕೇಂದ್ರದಲ್ಲಿ ಮತ ಚಲಾಯಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.


Share this with Friends

Related Post