Mon. Dec 23rd, 2024

ಖ್ಯಾತ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ

Share this with Friends

ಬೆಂಗಳೂರು: ಸ್ಯಾಂಡಲ್ ವುಡ್ ನ ಮಠ ಚಿತ್ರದ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಠ, ಎದ್ದೇಳು ಮಂಜುನಾಥ,ಡೈರೆಕ್ಟರ್ ಸ್ಪೆಷಲ್ ಸೇರಿದಂತೆ ಹಲವು ಪ್ರಸಿದ್ಧ ಚಲನಚಿತ್ರಗಳನ್ನು ಗುರುಪ್ರಸಾದ್ ನಿರ್ದೇಶನ ಮಾಡಿ ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಪಡೆದಿದ್ದರು.ಅಲ್ಲದೆ 12 ಚಲನ‌ಚಿತ್ರಗಳಲ್ಲಿ ‌ನಟಿಸಿದ್ದರು.ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಪಾಲ್ಗೊಂಡಿದ್ದರು.

ಮಾದನಾಯಕನಹಳ್ಳಿ ಯಲ್ಲಿರುವ ಟಾಟಾ ನ್ಯೂ ಹೆವೆನ್ ಅಪಾರ್ಟ್ಮೆಂಟ್ ನ‌ಲ್ಲಿ ಗುರುಪ್ರಸಾದ್‌ ವಾಸವಿದ್ದರು. ಅವರ ಕೊಠಡಿಯಲ್ಲೇ ಫ್ಯಾನ್ ಗೆ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾನುವಾರ ಬೆಳಗ್ಗೆ ಕೆಟ್ಟ ವಾಸನೆ ಬರುವುದನ್ನು ನೋಡಿ ಅಕ್ಕಪಕ್ಕದ ನಿವಾಸಿಗಳು‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಮಾದನಾಯಕನಹಳ್ಳಿ‌ ಪೊಲೀಸರು ಬಾಗಿಲನ್ನು ಮೀಟಿ ತೆಗೆದು ಒಳಹೋಗಿದ್ದಾರೆ.

ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸುಮಾರು ಐದಾರು ದಿನಗಳ ಹಿಂದೆಯೇ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಗುರುಪ್ರಸಾದ್ ಎರಡನೆ‌ ಮದುವೆ ಮಾಡಿಕೊಂಡಿದ್ದರು, ಅವರಿಗೆ ಬಹಳ ಕುಡಿತದ ಚಟ ಇತ್ತು ಎಂದು ಅವರನ್ನು ಬಲ್ಲವರು ತಿಳಿಸಿದ್ದಾರೆ.

ರಾಮನಗರದ ಕನಕಪುರದಲ್ಲಿ 1972 ನವೆಂಬರ್ 2 ರಂದು ಗುರುಪ್ರಸಾದ್ ಜನಿಸಿದ್ದರು. ನಿನ್ನೆ ಅವರ ಹುಟ್ಟುಹಬ್ಬ,ಇಂದು ಡೆತ್ ಡೆ ಆಚಿರಸಬೇಕಿರುವುದು ನಿಜಕ್ಕೂ ದುರಂತ.

ಗುರು ಪ್ರತಿಭಾನ್ವಿತ‌ ನಿರ್ಧೇಶಕರಾಗಿದ್ದರು.
ಅವರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.


Share this with Friends

Related Post