Mon. Dec 23rd, 2024

ಖ್ಯಾತ ಘಜಲ್ ಸಿಂಗರ್ ಪಂಕಜ್ ಉದಾಸ್ ಇನ್ನಿಲ್ಲ

Share this with Friends

ಮುಂಬೈ,ಫೆ.26: ಖ್ಯಾತ ಘಜಲ್ ಸಿಂಗರ್ ಪಂಕಜ್ ಉದಾಸ್ ಅವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಜನಪ್ರಿಯ ಗಾಯಕ ಪಂಕಜ್ ಉಧಾಸ್ ಅವರು ಇಂದು
ಸಂಗೀತ‌ ಪ್ರೇಮಿಗಳು,ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.ಅವರಿಗೆ 72 ವರ್ಷಗಳಾಗಿತ್ತು.

ಪಂಕಜ್ ಉಧಾಸ್ ಅವರ ನಿಧನವನ್ನು ಪುತ್ರಿ ನಯಾಬ್ ಖಚಿತಪಡಿಸಿದ್ದು, ಕುಟುಂಬಸ್ಥರು ಸಾಮಾಜಿಕ ಜಾಲತಾಣಗಳ ಮೂಲಕ ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.

ಪಂಕಜ್ ಉದಾಸ್ ಅವರ ಚಿಟ್ಟಿ‌ ಆಯೀರೇ ಚಿಟ್ಟೀ… ಮತ್ತು ಚಾಂದ್‌ ಜೈಸಾ ರಂಗ್ ಗೀತೆಗಳು ದೇಶಾದ್ಯಂತ ಬಹಳ ಜನಪ್ರಿಯವಾಗಿವೆ.

ಬಾಲಿವುಡ್ ನಲ್ಲಿ ಹಲವಾರು ಹಿಟ್ ಹಾಡುಗಳನ್ನು ನೀಡಿದ್ದ ಪಂಕಜ್ ಉಧಾಸ್, ಕಿಚ್ಚ ಸುದೀಪ್ ಅಭಿನಯದ ಸ್ಪರ್ಶ ಸಿನಿಮಾದ ಬರೆಯದ ಮೌನದ ಕವಿತೆ ಹಾಡಾಯಿತು ಹಾಗೂ ಚಂದಕಿಂತ ಚಂದ ನೀನೇ ಸುಂದರ ಎಂಬ ಹಾಡು ಕೂಡಾ ಅಷ್ಟೇ ಜನಪ್ರಿಯವಾಗಿವೆ.

ಪಂಕಜ್ ಉಧಾಸ್ ಅವರ ನಿಧನಕ್ಕೆ ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕ ‌ಸೋನು ನಿಗಮ್ ಸೇರಿದಂತೆ ಚಿತ್ರರಂಗದ ಗಣ್ಯರು, ಸಂಗೀತ ಕ್ಷೇತ್ರದ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.


Share this with Friends

Related Post