Tue. Dec 24th, 2024

ಸಾಲಗಾರರ ಕಿರುಕುಳಕ್ಕೆ ಹೆದರಿ ಆಟೋ ಚಾಲಕ ಡೆತ್ ನೋಟ್ ಬರೆದಿಟ್ಟು ನಾಪತ್ತೆ

Share this with Friends

ಹುಣಸೂರು,ಜು.25: ಸಾಲಗಾರರ ಕಿರುಕುಳದಿಂದ ಹೆದರಿ ಆಟೋ ಡ್ರೈವರ್ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾದ ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಟ್ಟುವಾಡಿ ಗ್ರಾಮದ ಪ್ರಸಾದ್(37) ನಾಪತ್ತೆಯಾಗಿದ್ದಾರೆ.

ನಾಲ್ಕು ದಿನಗಳ ಹಿಂದೆ ನನ್ನ ಸಾವಿಗೆ ಫೈನಾನ್ಸ್ ಮಧು,ಟೆಂಪೋ ಕಿರಣ್ ಕಾರಣ ಎಂದು ಅವರ ಮೊಬೈಲ್ ನಂಬರ್ ನಮೂದಿಸಿ ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದು,ಇನ್ನೂ ಅವರ ಬಗ್ಗೆ ಯಾವುದೇ ಮಾಹಿತಿ ಸಿಗದೆ ಕುಟುಂಬಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಜುಲೈ 20 ರಂದು ಪತ್ನಿ ಲಕ್ಷ್ಮಿಗೆ ಗದ್ದುಗೆಗೆ ಹೋಗಿ ಬರುವುದಾಗಿ ತಿಳಿಸಿ ಪ್ರಸಾದ್ ಮನೆ ಬಿಟ್ಟಿದ್ದಾರೆ,ಅವರ ಮೊಬೈಲ್ ನಂಬರ್ ಗೆ ಸಂಪರ್ಕಿಸಿದಾಗ ಸ್ವಿಚ್ ಆಫ್ ಬಂದಿದೆ.

ಮನೆ ಮುಂದೆ ನಿಂತಿದ್ದ ಆಟೋ ಪರಿಶೀಲಿಸಿದಾಗ ಡೆತ್ ನೋಟ್ ಹಾಗೂ ಮೊಬೈಲ್ ದೊರೆತಿದೆ.ಕೂಡಲೇ ಪತ್ನಿ ಲಕ್ಷ್ಮಿ ಬಿಳಿಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪತಿಯನ್ನು ಹುಡುಕಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಪ್ರಸಾದ್ 4 ರಿಂದ 5 ಲಕ್ಷ ಸಾಲ ಮಾಡಿದ್ದಾರೆ,ಆದರೆ ಟೆಂಪೋ ಕಿರಣ್ ಎಂಬಾತ ಆಗಾಗ ಮನೆಗೆ ಬಂದು ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಲಕ್ಷ್ಮಿ ಆರೋಪಿಸಿದ್ದಾರೆ.

ಫೈನಾನ್ಸ್ ನಡೆಸುತ್ತಿರುವ ಮಧು ಬಳಿ ಪ್ರಸಾದ್ ಗೆ ಕಿರಣ್ ಜಾಮೀನಾಗಿ ಸಾಲ ಕೊಡಿಸಿದ್ದಂತೆ,ಹೀಗಾಗಿ ಕಿರಣ್ ಆಗಾಗ ಮನೆಗೆ ಬಂದು ಸಾಲ ಹಿಂದಿರುಗಿಸುವಂತೆ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ಲಕ್ಷ್ಮಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.


Share this with Friends

Related Post