Tue. Dec 24th, 2024

ಮಹಿಳೆಯೊಂದಿಗೆ ಅಸಭ್ಯ ವರ್ತನೆ: ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲು

Share this with Friends

ಮೈಸೂರು,ಮೇ.20: ಸಾಲ ವಸೂಲಿಗೆ ಬಂದ ಕಿರಾತಕ ಮನೆ ಮುಂದೆ ಬಟ್ಟೆಬಿಚ್ಚಿಕೊಂಡು ಗೃಹಿಣಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು,ಆತನ ವಿರುದ್ಧ ಪ್ರಕರಣ‌ ದಾಖಲಾಗಿದೆ.

ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗನಹಳ್ಳಿಯಲ್ಲಿ ಪ್ರಸನ್ನ ಎಂಬಾತ ಗೃಹಿಣಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ

ನಾಗನಹಳ್ಳಿಯ ರಘು ಎಂಬುವರು ತಮ್ಮ ಮಗುವಿಗೆ ಚಿಕಿತ್ಸೆ ಕೊಡಿಸಲು ಪ್ರಸನ್ನನ ಬಳಿ 7 ಸಾವಿರ ಸಾಲ ಪಡೆದಿದ್ದಾರೆ. ಆ ಹಣಕ್ಕೆ ಶೇ. 20ರಷ್ಟು ಬಡ್ಡಿಯನ್ನೂ ನೀಡುತ್ತಿದ್ದಾರೆ.

ಅಸಲು ಹಣವನ್ನ 6 ತಿಂಗಳ ನಂತರ ಕೊಡುವುದಾಗಿ ರಘು ತಿಳಿಸಿದ್ದಾರೆ.ಹಣಕ್ಕೆ ಪಟ್ಟು ಹಿಡಿದ ಪ್ರಸನ್ನ ಮನೆ ಬಳಿಗೆ ಬಂದು ರಘು ಪತ್ನಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.

ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಬಟ್ಟೆಬಿಚ್ಚಿ ನಿಂತು ಬಾ ಎಂದು ಕರೆದು ಮಾನಸಿಕ ಕಿರುಕುಳ ನೀಡಿದ್ದಾನೆ.

ನಂತರ ರಘು ಪತ್ನಿ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಸನ್ನನ ವಿರುದ್ದ ದೂರು ನೀಡಿದ್ದು‌ ಎಫ್.ಐ.ಆರ್.ದಾಖಲಾಗಿದೆ.


Share this with Friends

Related Post