ಬಳ್ಳಾರಿ: ಬಿಜೆಪಿ ನಾಯಕ ಹಾಗು ಮಾಜಿ ಸಚಿವ ಬಿ ಶ್ರೀರಾಮುಲು ವಿರುದ್ಧ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ನಿಯಮ ಉಲ್ಲಂಘನೆ ಆರೋಪ ಪ್ರಕರಣ ದಾಖಲಾಗಿದ್ದು ಮತ್ತೊಂದು ಕಾನೂನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಜ.17 ರಂದು ಬಳ್ಳಾರಿಯಲ್ಲಿ ನಡೆದಿದ್ದ ಬಿಜೆಪಿ ಪ್ರತಿಭಟನಾ ಸಮಾವೇಶದಲ್ಲಿ ಭಾಷಣ ಮಾಡುವಾಗ ಶಾಸಕ ಭರತ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸುವ ಭರಾಟೆಯಲ್ಲಿ ಫೋಕ್ಸೋ ಕಾಯ್ದೆ ನಿಯಮ ಉಲ್ಲಂಘಿಸಿದ ಗಂಭೀರ ಆರೋಪ ರಾಮುಲು ವಿರುದ್ಧ ಕೇಳಿಬಂದಿದೆ.
ಫೋಕ್ಸೋ ಪ್ರಕರಣವೊಂದರಲ್ಲಿ ನೊಂದ ಬಾಲಕಿಯ ಹೆಸರು, ಶಾಲೆ, ವಿವರ ಬಹಿರಂಗವಾಗಿ ಸಮಾವೇಶದಲ್ಲಿ ಹೇಳಿದ್ದ ಆರೋಪಕ್ಕೆ ಸಿಲುಕಿರುವ ರಾಮುಲು ವಿರುದ್ಧ ಎಪಿಎಂಸಿ ಠಾಣೆ ಸಿಪಿಐ ಮೊಹಮ್ಮದ್ ರಫಿಕ್ ದೂರಿನ ಮೇರೆಗೆ ಕೇಸ್ ದಾಖಲಾಗಿದೆ.ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಶ್ರೀರಾಮುಲು ವಿರುದ್ಧ ಪೋಕ್ಸೋ ಕೇಸ್ ಉಲ್ಲಂಘನೆ ಕೇಸ್ ರಿಜಿಸ್ಟರ್ ಆಗಿದೆ.
ಫೋಕ್ಸೋ ಆ್ಯಕ್ಟ್ ಪ್ರಕಾರ ನೊಂದ ಬಾಲಕಿಯ ಹೆಸರು ವಿವರ ಎಲ್ಲೂ ಬಹಿರಂಗ ಪಡಿಸದಂತೆ ನಿರ್ಬಂಧವಿದೆ ಇಷ್ಟಿದ್ದರೂ ಫೋಕ್ಸೋ ಕಾನೂನು ಉಲ್ಲಂಘಿಸಿದ ಹಿನ್ನೆಲೆ ಶ್ರೀರಾಮುಲು ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಳ್ಳಾರಿ ಗಾಂಜಾ, ಡ್ರಗ್ಸ್ ಹಬ್ ಆಗಿದೆ ಎಂದು ಆರೋಪಿಸುವಾಗ ನೊಂದ ಬಾಲಕಿಯ ವಿವರ ಬಹಿರಂಗವಾಗಿ ಹೇಳಿದ್ದ ಶ್ರೀರಾಮುಲು ಕಲಂ 23 ಪೋಕ್ಸೋ ಕಾಯ್ದೆ ಉಲ್ಲಂಘನೆ ಹಾಗೂ ಜೆಜೆ 74 ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಆರೋಪಿಯಾಗಿದ್ದಾರೆ.

