Thu. Jan 9th, 2025

ವಕೀಲರೊಬ್ಬರ ಮೇಲೆ ಹಲ್ಲೆ:ಮೂವರ ವಿರುದ್ದ ಎಫ್ ಐ ಆರ್

Share this with Friends

ಮೈಸೂರು,ಏ.15: ಅಂಗಡಿ ಮುಂದೆ
ಕೂಲ್ ಡ್ರಿಂಕ್ಸ್ ಕುಡಿಯುತ್ತಿದ್ದ ವಕೀಲರೊಬ್ಬರ ಮೇಲೆ ಮೂವರು ಕಿರಿಕ್ ಮಾಡಿ ಹಲ್ಲೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.

ಮೈಸೂರಿನ ಅಶೋಕಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಜಯನಗರದಲ್ಲಿ ಘಟನೆ ನಡೆದಿದ್ದು, ಅಡ್ವೊಕೇಟ್ ಸುನಿಲ್ ಕುಮಾರ್ ಗಾಯಗೊಂಡಿದ್ದಾರೆ.

ನಂಜುಂಡ ಹಾಗೂ ಆತನ ಇಬ್ಬರು ಸ್ನೇಹಿತರು ಹಲ್ಲೆ ನಡೆಸಿದರೆಂದು ಸುನಿಲ್ ದೂರು ನೀಡಿದ್ದು ಮೂವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಸುನಿಲ್ ಅವರು ಸ್ನೇಹಿತರೊಂದಿಗೆ ಕೂಲ್ ಡ್ರಿಂಕ್ಸ್ ಕುಡಿಯುತ್ತಿದ್ದಾಗ ಏಕಾಏಕಿ ಬಂದ ನಂಜುಂಡ ಕ್ಯಾತೆ ತೆಗೆದು ತಳ್ಳಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ವಕೀಲ ಎಂದು ಹೇಳಿದರೂ ಕೇಳದೆ ಹಲ್ಲೆ ನಡೆಸಿದ್ದಾರೆ.ಗಾಯಗೊಂಡ ಸುನಿಲ್ ಕುಮಾರ್ ಚಿಕಿತ್ಸೆ ಪಡೆದು ನಂತರ ಅಶೋಕಾಪುರಂ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.


Share this with Friends

Related Post