Sat. Apr 19th, 2025

ಒಳಚರಂಡಿ ವ್ಯವಸ್ಥೆ ಸರಿಪಡಿಸಿ: ಶಾಸಕ ಟಿ.ಎಸ್.ಶ್ರೀ ವತ್ಸ ಸೂಚನೆ

Share this with Friends

ಮೈಸೂರು, ಮಾ.12: ಮೈಸೂರಿನ
43 ನೇ ವಾರ್ಡ್ ವ್ಯಾಪ್ತಿಯ ಶಾರದದೇವಿ ನಗರ,ಜನತಾ ನಗರ,ಟಿ.ಕೆ ಲೇ ಔಟ್ ಸುತ್ತಮುತ್ತ ಶಾಸಕ ಶ್ರೀವತ್ಸ ಪಾದಯಾತ್ರೆ ಮಾಡಿ ಸಾರ್ವಜನಿಕರಿಂದ ಅಹವಾಲು ಆಲಿಸಿದರು.

ಪಾದಯಾತ್ರೆ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ಒಳಚರಂಡಿ ಅವೈಜ್ಞಾನಿಕ ವಾಗಿದ್ದುದು ಕಂಡು ಬಂದಿತು.

ಮಳೆ ಬಂದ ಸಂಧರ್ಭದಲ್ಲಿ ಸಾರ್ವಜನಿಕರಿಗೆ ಅನಾನುಕೂಲವಾಗುವುದರಿಂದ ಕೂಡಲೆ ಸರಿಪಡಿಸಿ ಎಂದು ಸೂಚಿಸಿದರು.

ಉದ್ಯಾನವನಗಳಲ್ಲಿ ರಾತ್ರಿ ಪುಂಡರ ಹಾವಳಿ ಹೆಚ್ಚಾಗಿದ್ದು ಪೋಲಿಸ್ ಗಸ್ತು ನೀಡಬೇಕು, ಖಾಲಿ ನಿವೇಶನ ಇರುವ ರೆವಿನ್ಯೂ ಮನೆಗಳ ಸುತ್ತ ಮುತ್ತ ಕಸ ಹಾಕಬಾರದು ಎಂದು ತಿಳಿಸಿದರು.

ಕೃಷ್ಣ ಮೂರ್ತಿ ಬಡಾವಣೆಯಲ್ಲಿ ಮರಗಳು ವಿದ್ಯುತ್ ಕಂಬಗಳಿಗೆ ತಾಕುವುದರಿಂದ ಕೂಡಲೆ ಟ್ರಿಂ ಮಾಡುವಂತೆ ಶ್ರೀವತ್ಸ‌ ಸೂಚಿಸಿದರು.

ಈ ವೇಳೆ ನಗರಪಾಲಿಕೆ ಮಾಜಿ ಸದಸ್ಯ ಜಗದೀಶ್,ಮುಖಂಡರಾದ ಜೋಗಿ ಮಂಜು, ಶಿವಣ್ಣ,ಮಧುಕೆಂಚ,ರಮೇಶ್,ಬಸವರಾಜು,ಈರೇಗೌಡ,ಚಂದ್ರಪ್ಪ,ಲೋಹಿತ್,ಶ್ರೀನಿವಾಸ್, ಪೂರ್ಣಿಮಾ, ಕಿಶೋರ್, ಪ್ರದೀಪ್, ಶಿವರಾಜ್ ರಾವ್,ರಮೇಶ್,ಜಯರಾಮ್,
ಸತ್ಯಾನಂದ ವಿಟ್ಟು ಹಾಗೂ ಅಧಿಕಾರಿಗಳು ಹಾಜರಿದ್ದರು.


Share this with Friends

Related Post