Sun. Dec 29th, 2024

ಫ್ಲ್ಯಾಟ್ ನಲ್ಲಿ ನಾಲ್ಕು ಮಂದಿ ಮೃತದೇಹ ಪತ್ತೆ

Share this with Friends

ಸೂರತ್,ಜೂ.16: ಗುಜರಾತ್ ನ ಸೂರತ್ ನಲ್ಲಿರುವ ಜಹಾಂಗೀರ್ ಪುರ ಪ್ರದೇಶದ ಫ್ಲ್ಯಾಟ್ ವೊಂದರಲ್ಲಿ ನಾಲ್ಕು ಮಂದಿಯ ಶವ ಪತ್ತೆಯಾಗಿದೆ.

ವೃದ್ಧ ಮತ್ತು ಮೂವರು ಮಹಿಳೆಯರು ಶವವಾಗಿ ಪತ್ತೆಯಾಗಿದ್ದಾರೆ. ಫ್ಲ್ಯಾಟ್ ಒಳಗೆ ಅನಿಲ ಚಾಲಿತ ಗೀಸರ್ ಚಲಿಸುತ್ತಿದ್ದು,ನಾಲ್ವರೂ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಫ್ಲ್ಯಾಟ್ ಮಾಲೀಕ ಜಸುಬೆನ್ ವಧೇಲ್, ಅವರ ಸಹೋದರಿಯರಾದ ಶಾಂತಾಬೆನ್ ವಧೇಲ್ (53), ಗೌರಿಬೆನ್ ಮೇವಾಡ್ (55) ಮತ್ತು ಗೌರಿಬೆನ್ ಅವರ ಪತಿ ಹೀರಾಭಾಯ್ (60) ಅವರಗಳು ಮೃತಪಟ್ಟ ದುರ್ದೈವಿಗಳು.

ಜಸುಬೆನ್ ಅವರ ಮಗ ಮುಖೇಶ್ ಬೆಳಿಗ್ಗೆ ಚಾಯ್ ನೀಡಲು ಫ್ಲ್ಯಾಟ್ ಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.

ಅವರು ಫ್ಲ್ಯಾಟ್ ಗೆ ಬೇರೆ ಕೀ ಬಳಸಿ ಒಳಗಡೆ ಹೋಗಿ ನೋಡಿದಾಗ ತಂದೆ ಮತ್ತು ಮೂವರು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ನೋಡಿ ಅಕ್ಕಪಕ್ಕದವರಿಗೆ ತಿಳಿಸಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ.ಆದರೆ ಪ್ರಯೋಜನವಾಗಿಲ್ಲ.

ಮೃತರ ದೇಹದ ಮೇಲೆ ಯಾವುದೇ ಗಾಯಗಳು ಅಥವಾ ಗುರುತುಗಳು ಇಲ್ಲ,ಹಾಗಾಗಿ ಅನಿಲ ಸೋರಿಕೆಯಾಗಿ ಮೃತಪಟ್ಟಿರಬಹುದು,ವೈದ್ಯಕೀಯ ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ ಎಂದು ಡಿಸಿಪಿ‌ ಆರ್.ಪಿ ಬರೋತ್ ತಿಳಿಸಿದ್ದಾರೆ.


Share this with Friends

Related Post