Fri. Nov 1st, 2024

ಚಾಮುಂಡಿ ಬೆಟ್ಟದ ಭಕ್ತರಿಗೆ ವಿ-ಗಾರ್ಡ್ ಕಂಪನಿಯಿಂದ ಉಚಿತ ಶುದ್ಧ ನೀರಿನ ಘಟಕ

Share this with Friends

ಮೈಸೂರು, ಜು.25: ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರ ಅನೂಕಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನ ವಿ-ಗಾರ್ಡ್ ಕಂಪನಿ ಉಚಿತವಾಗಿ ನೀಡುವ ಮೂಲಕ ಮಾದರಿಯಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೆಗೌಡರು ಚಾಮುಂಡಿ ಬೆಟ್ಟಕ್ಕೆ ಮೂಲಭೂತ ಸೌಲಭ್ಯಗಳನ್ನ ಶಾಶ್ವತವಾಗಿ ಒದಗಿಸಲು ಸಿ.ಎಸ್. ಆರ್ ವಲಯ ಖಾಸಗಿ ಕಂಪನಿಗಳಿಗೆ ಮನವಿ ಮಾಡಿದ್ದರು.

ಇದಕ್ಕೆ ಸ್ಪಂದಿಸಿದ ವಿ-ಗಾರ್ಡ್ ಕಂಪನಿ ಚಾಮುಂಡಿಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಪ್ರತಿದಿನ 50ಸಾವಿರ ಮಂದಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಾಮರ್ಥ್ಯವುಳ್ಳ ವಿ-ಗಾರ್ಡ್ ಆರ್ ಒ ಪ್ಲಾಂಟ್ ಶುದ್ಧ ಕುಡಿಯುವ ನೀರಿನ ಘಟಕವನ್ನ ನೀಡಿದ್ದು ದಾಸೋಹ ಭವನದಲ್ಲಿ ಸ್ಥಾಪಿಸಲಾಗಿದೆ.

ವಿ- ಗಾರ್ಡ್ ಕಂಪನಿಯ ಉಪಾಧ್ಯಕ್ಷ ಸೂರ್ಯಪ್ರಸಾದ್ ವಿ.ಜೆ, ಶಾಖೆ ವ್ಯವಸ್ಥಾಪಕ ಹರ್ಷೇಂದ್ರ ಪ್ರಸಾದ್ ಅವರು ಇಂದು ಬೆಟ್ಟದ‌ ದಾಸೋಹ ಭವನದಲ್ಲಿ ಹಸ್ತಾಂತರಿಸಿದರು.

ಈ ವೇಳೆ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಶಶಿಶೇಖರ ದೀಕ್ಷಿತ್ ಅವರು ಕುಡಿಯುವ ನೀರಿನ ಘಟಕ ಯಂತ್ರಕ್ಕೆ ಪೂಜೆ ಸಲ್ಲಿಸಿದರು.

ನಂತರ ಮಾತನಾಡಿದ ಅವರು ಮನುಷ್ಯನಿಗೆ ಶುದ್ಧ ನೀರು, ಗಾಳಿ, ಆಹಾರ ಬಹಳ ಮುಖ್ಯ. ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತರು ಮತ್ತು ಸಾರ್ವಜನಿಕರ ಅನೂಕೂಲಕ್ಕೆ ವಿವಿಧ ಮೂಲಭೂತ ಸೌಲಭ್ಯವನ್ನು ಸರ್ಕಾರ ಹಾಗೂ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಒದಗಿಸಲು ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಾಮಾಜಿಕ ಕಳಕಳಿಯುಳ್ಳ ಸಂಘ ಸಂಸ್ಥೆಗಳು ಸಾರ್ವಜನಿಕರ ಸಹಭಾಗಿತ್ವ ಬಹಳ ಮುಖ್ಯವಾದುದು ಎಂದು ಹೇಳಿದರು.

ವಿ-ಗಾರ್ಡ್ ಕಂಪನಿ ವತಿಯಿಂದ ಚಾಮುಂಡಿ ಬೆಟ್ಟಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿ,ಇದರಿಂದ ಬೆಟ್ಟಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾಧಿಗಳಿಗೆ ಅನೂಕೂಲವಾಗುತ್ತದೆ ಎಂದು ತಿಳಿಸಿದರು.

ಸಂಘಸಂಸ್ಥೆಗಳು ಇಂತಹ ಸೇವಾಮನೋಭಾವದ ಕೊಡುಗೆ ನೀಡಲು ಇಚ್ಛಿಸಿದಲ್ಲಿ ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಛೇರಿಯನ್ನ ಸಂಪರ್ಕಿಸಬೇಕೆಂದು ಶಶಿಶೇಖರ ಧೀಕ್ಷಿತ್ ಸಲಹೆ ನೀಡಿದರು.

ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ ,ತನ್ವಿ ಟ್ರೇಡಿಂಗ್ ಕಾರ್ಪೋ ದೀಪಕ್ ಆರ್ ಹೆಬ್ಬಾಳ್, ಚಮನ್, ಪುರುಷೋತ್ತಮ್, ಅರಣ್ ಮತ್ತಿತರರು ಹಾಜರಿದ್ದರು.


Share this with Friends

Related Post