Thu. Jan 2nd, 2025

ಶಾಲಾ ಮಕ್ಕಳಿಗೆ 1 ವರ್ಷಕ್ಕಾಗುವಷ್ಟು ಪುಸ್ತಕ,ಲೇಖನಿ ಸಾಮಗ್ರಿ ಉಚಿತ ವಿತರಣೆ

Share this with Friends

ಶಿವಮೊಗ್ಗ, ಜೂ.15: ಶಿವಮೊಗ್ಗ ಜಿಲ್ಲೆ
ಹುಂಚ ಹೋಬಳಿ, ಹೊಂಡಲಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳಿಗೆ ಒಂದು ವರ್ಷಕ್ಕಾಗುವಷ್ಟು ಪುಸ್ತಕ,ಲೇಖನಿ ಸಾಮಗ್ರಿಗಳನ್ನ ಉಚಿತವಾಗಿ ನೀಡಲಾಯಿತು

ಡಾ.ಹರ್ಷಿತ ಬಿ.ಹೆಚ್ ಬೆಂಗಳೂರು,
ರಾಜಾಶೇಖರ್ ಹೀರೇಬೈಲು ಸದಸ್ಯರು ಗ್ರಾಂ.ಪ ಹುಂಚ,ಲಕ್ಷಣ್ ಮಹಾವೀರ ಮೆಡಿಕಲ್ ಹುಂಚ,ಯುವರಾಜ್ ಮಳಲಿಕೊಪ್ಪ ಅವರುಗಳು ಪುಸ್ತಕ ಹಾಗೂ ಲೆಖನಿ ಸಾಮಾಗ್ರಿಗಳನ್ನು ಕೊಡುಗೆ ನೀಡಿ ಇತರರಿಗೆ ಮಾದರಿಯಾಗಿದ್ದಾರೆ.

ಅದೂ ಒಂದಲ್ಲಾ,ಎರಡಲ್ಲಾ ಒಂದು‌ ವರ್ಷಕ್ಕಾಗುವಷ್ಟು ಪುಸ್ತಕ ಹಾಗೂ ಲೆಖನಿ ಸಾಮಾಗ್ರಿಗಳನ್ನು ಕೊಡುಗೆ ನೀಡಿರುವುದು ನಿಜಕ್ಕೂ ಶ್ಲಾಘನೀಯ.

ಎಸ್ ಡಿ ಎಂ‌ ಸಿ ಕಮಿಟಿಯ ಅಧ್ಯಕ್ಷ ನಾಗೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯುವರಾಜ್, ರಾಜಶೇಖರ್ ಹೀರೇಬೈಲು, ಹುಂಚ ಗ್ರಾಮಪಂಚಾಯ್ತಿ ಸದಸ್ಯರು. ಲಕ್ಷ್ಮಣ್ ಮಾಹಾವೀರ್ ಮೆಡಿಕಲ್ ಹುಂಚ. ಅವರುಗಳು ಮಕ್ಕಳಿಗೆ ಪುಸ್ತಕ ಹಾಗೂ ಲೇಖನಿ ಸಾಮಗ್ರಿಗಳನ್ನ ವಿತರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಗೀತಾ,ಸಹಶಿಕ್ಷಕರು ವಿಶ್ವನಾಥ್ ಉಪಸ್ಥಿತರಿದ್ದರು.


Share this with Friends

Related Post