ಮೈಸೂರು, ಜೂ.22: ರೋಗ ಬರುವ ಮುನ್ನ ಎಚ್ಚರ ವಹಿಸಿದರೆ ಆಸ್ಪತ್ರೆ ಮತ್ತು ಔಷಧಗಳಿಂದ ದೂರವಿರಬಹುದು ಎಂದು
ತ್ರಿವೇಣಿ ಗೆಳೆಯರ ಬಳಗದ ಅಧ್ಯಕ್ಷ ಬಿ ಆನಂದ್ ಹೇಳಿದರು.
ಮೈಸೂರಿನ ತ್ರಿವೇಣಿ ವೃತ್ತದ ಕೆ ಎಸ್ ಐ ಬಿ ಕಾಲೋನಿಯಲ್ಲಿ ತ್ರಿವೇಣಿ ಗೆಳೆಯರ ಬಳಗದ 30ನೇ ವಾರ್ಷಿಕೋತ್ಸವ ಪ್ರಯುಕ್ತ ಸ್ಪರ್ಶ ಆಸ್ಪತ್ರೆ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರ ದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ,ನೇತ್ರ ತಪಾಸಣೆ, ದಂತ ತಪಾಸಣೆ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಬಡವರಿಗೆ ವರದಾನವಾಗಲಿದೆ ಎಂದು ಹೇಳಿದರು.
ಆರೋಗ್ಯವಾಗಿದ್ದರೆ, ಸುಖವಾಗಿ ಬಾಳಬಹುದು, ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗೆ ಖರ್ಚು ಮಾಡಬೇಕಾಗುತ್ತದೆ, ಆದ್ದರಿಂದ ರೋಗದ ಲಕ್ಷಣ ಕಾಣುವ ಮುನ್ನವೇ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು ಎಂದು ತಿಳಿಸಿದರು
ಜೀವದಾರ ರತ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ಆರೋಗ್ಯ ಶಿಬಿರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ, ಇಂತಹ ಶಿಬಿರಗಳನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಆಯೋಜಿಸಬೇಕು ಎಂದು ಸಲಹೆ ನೀಡಿದರು.
300ಕ್ಕೂ ಹೆಚ್ಚು ಮಂದಿಗೆ ಶಿಬಿರದಲ್ಲಿ ರಕ್ತದೊತ್ತಡ, ದಂತ, ಮಧುಮೇಹ, ಕಣ್ಣಿನ ತಪಾಸಣೆ ಮಾಡಿ, ಅಗತ್ಯ ಇರುವ ರೋಗಿಗಳಿಗೆ ಉಚಿತ ಔಷಧ ವಿತರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 50 ಜನ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.
ದೇವಸ್ಥಾನದ ಅಧ್ಯಕ್ಷರು ಗಣೇಶ್ ಬಾಲಾಜಿ, ಕಲ್ಯಾಣೇಶ್ವರ ದೇವಸ್ಥಾನದ ಗೌರವಾಧ್ಯಕ್ಷ ಪ್ರಭಣ್ಣ, ಶಕ್ತಿನಗರ ಹಿತರಕ್ಷಣೆ ಸಮಿತಿಯ ಮಾಜಿ ಅಧ್ಯಕ್ಷ ವೆಂಕಟೇಶ್, ಪಂಚವಟಿ ಹೋಟೆಲ್ ಮಾಲೀಕ ಸತೀಶ್, ಬಿಜೆಪಿ ಮುಖಂಡರಾದಂತ ಮಣಿರತ್ನಂ, ನಾಗರಾಜ್, ಶ್ರಿಕಂಠ, ಮೂರ್ತಿ, ಬಿಜೆಪಿ ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಹಿತ್, ವಾರ್ಡ್ ಅಧ್ಯಕ್ಷ ಶಿವು, ಬಸವರಾಜ್ ,ಜನಾರ್ಧನ್ ಸ್ವಾಮಿ,ಕಿರಣ, ಮಹೇಶ್ ,ಶಾಮಲಾ ಗೌಡ, ಶೈಲಜಮ್ಮ ಮತ್ತಿತರರು ಹಾಜರಿದ್ದರು.