Mon. Jan 6th, 2025

ಒಕ್ಕಲಿಗ ಯುವ ಬ್ರಿಗೇಡ್ ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

Share this with Friends

ಬೆಂಗಳೂರು, ಏ.14: ಒಕ್ಕಲಿಗ ಯುವ ಬ್ರಿಗೇಡ್ ಹಾಗೂ ಎನ್ ಆರ್ ಐ ಒಕ್ಕಲಿಗ ಬ್ರಿಗೇಡ್ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.

ಬೆಂಗಳೂರಿನ ಪ್ಯಾಲೇಸ್ ಗುಟ್ಟಳ್ಳಿಯಲ್ಲಿರುವ ಬಿಲ್ವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ಮತ್ತು ಎನ್ ಆರ್ ಐ ಒಕ್ಕಲಿಗ ಬ್ರಿಗೇಡ್ ಸಂಘಟನೆಗಳು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದವು.

ಶಿಬಿರವನ್ನು ಆದಿಚುಂಚನಗಿರಿ ಮಠದ ಶ್ರೀ ಸೋಮನಾಥ ಸ್ವಾಮೀಜಿಯವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪ್ಯಾಲೇಸ್ ಗುಟ್ಟಳ್ಳಿ‌ ಸಮೀಪದ ನೂರಾರು ಮಹಿಳೆಯರು ಉಚಿತ ತಪಾಸಣೆ ಮಾಡಿಸಿಕೊಂಡು ಶಿಬಿರಿದ ಸದುಪಯೋಗ ಪಡಿಸಿಕೊಂಡರು.

ಬಿಲ್ವ ಆಸ್ಪತ್ರೆಯ ನುರಿತ ವೈದ್ಯರು ಬಿಪಿ,ಶುಗರ್,ನೇತ್ರ ಹೀಗೆ‌ ಹಲವಾರು ತಪಾಸಣೆ ಮಾಡಿ ಸಲಹೆಗಳನ್ನು ಜನರಿಗೆ ನೀಡಿದರು.

ಈ ಸಂದರ್ಭದಲ್ಲಿ ರವೀಂದ್ರ ಭಟ್, ಡಿ.ಕೆ ಪವಿತ್ರ, ಡಾಕ್ಟರ್ ಟಿ.ಆರ್. ಚಂದ್ರಶೇಖರ್ ಡಾಕ್ಟರ್ ಕೇಶವಮೂರ್ತಿ,ಡಾಕ್ಟರ್ ನಂಜುಂಡಯ್ಯ ಮತ್ತಿತರರು ಹಾಜರಿದ್ದರು.


Share this with Friends

Related Post