Fri. Nov 1st, 2024

ಫೆ.14 ರಂದು ಉಚಿತ ಸಾಮೂಹಿಕ ಅಕ್ಷರಾಭ್ಯಾಸ:ಪೋಸ್ಟರ್ ಬಿಡುಗಡೆ

Share this with Friends

ಮೈಸೂರು,ಫೆ.10 : ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ
ವಿಶ್ವೇಶ್ವರ ನಗರ,ಇಂಡಸ್ಟ್ರಿಯಲ್ ಸಬರ್ಬ್,
ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಫೆ.14 ರಂದು ಉಚಿತ ಸಾಮೂಹಿಕ ಅಕ್ಷರಾಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇದರ ಪ್ರಯುಕ್ತ ನಗರದ ಕಾಳಿದಾಸ ರಸ್ತೆಯಲ್ಲಿರುವ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮೇಲುಕೋಟೆಯ ಶ್ರೀ ಯದುಗಿರಿ ಯತಿರಾಜ ಮಠದ ಪೀಠಾಧಿಪತಿಗಳಾದ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿಯವರು ಉಚಿತ ಸಾಮೂಹಿಕ ಅಕ್ಷರಭ್ಯಾಸ ಹಾಗೂ ಸರಸ್ವತಿ ಪೂಜೆಯ ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ‌ ವೇಳೆ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ,
ಎಲ್ಲಾ ಜನಾಂಗದವರಿಗೂ ಉಚಿತ ಸಾಮೂಹಿಕ ಅಕ್ಷರಭ್ಯಾಸ ಹಾಗೂ ಸರಸ್ವತಿ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಫೆ.14.ರ ಬುಧವಾರ ಬೆಳಗ್ಗೆ 8 ರಿಂದ 10.30 ರವರಿಗೂ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಅಕ್ಷರಾಭ್ಯಾಸ ಮಾಡಿಸಲಿಚ್ಚಿಸುವ ಮಕ್ಕಳ ಪೋಷಕರು ದೂರವಾಣಿ 9880752727/7829067769 ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಸ್ಲೇಟ್-ಬಳಪ ನಮ್ಮ ಟ್ರಸ್ಟ್ ವತಿಯಿಂದ ಉಚಿತವಾಗಿ ಪ್ರಸಾದ ರೂಪದಲ್ಲಿ ನೀಡಲಾಗುವುದು 13.ರಂದು ನೋಂದಣಿಗೆ ಕಡೆಯದಿನವಾಗಿದೆ ಎಂದು ಹೇಳಿದರು

ಮೇಲುಕೋಟೆಯ ಚೆಲುವರಾಯಸ್ವಾಮಿ ದೇವಸ್ಥಾನದ ಪ್ರಥಮ ಸ್ಥಾನಿಕರಾದ ಕೆ ಎಸ್ ನಾರಾಯಣ ಅಯ್ಯಂಗಾರ್,
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಆರ್ ಯೋಗ ನರಸಿಂಹನ್ (ಮುರಳಿ), ಪುಟ್ಟಸ್ವಾಮಿ, ಹೆಚ್ ವಿ ಎಲ್ ಎನ್ ಆಚಾರ್, ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.


Share this with Friends

Related Post