Mon. Dec 23rd, 2024

“ಬಡ ಜನರ ಸೇವೆಯೇ ಧರ್ಮ” ಎಂದು ತಿಳಿಸಿದ ಡಾ.ಸಿ.ಜಿ.ಹಳ್ಳಿ ಮೂರ್ತಿ

Share this with Friends

ಬೆಂಗಳೂರು : ನಾಡಪ್ರಭು ಕೆಂಪೇಗೌಡ ಚಾರಿಟಬಲ್ ಟ್ರಸ್ಟ್ (ರಿ) ವತಿಯಿಂದ ಬೆಂಗಳೂರಿನ ಶಿವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾವಿರಕ್ಕೂ ಹೆಚ್ಚು ಬಡ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆಯನ್ನು ಭಾನುವಾರ ಮಾಡಲಾಯಿತು.

ನಾಡಪ್ರಭು ಕೆಂಪೇಗೌಡ ಚಾರಿಟಬಲ್ ಟ್ರಸ್ಟ್ ( ರಿ )ಸಂಸ್ಥಾಪಕ ಅಧ್ಯಕ್ಷರಾದ ಡಾ ‌.ಸಿ.ಜಿ.ಹಳ್ಳಿ ಮೂರ್ತಿ ಮಾತನಾಡಿ ಎಲ್ಲಾ ಮಕ್ಕಳು ಶಿಕ್ಷಣ ಪಡೆಯಬೇಕು ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ತರಲು ಸಾಧ್ಯ ಆದ್ದರಿಂದ ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು ಹಾಗೆಯೇ ನಾಡಪ್ರಭು ಕೆಂಪೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ.

ನಾಡಿನ ನುಡಿ, ಸಂಸ್ಕೃತಿ, ಸಾಹಿತ್ಯ ಬೆಳವಣಿಗೆಯ ರಾಜ್ಯ ಮಟ್ಟದ ಅನೇಕ ಕವಿಗೋಷ್ಠಿ ಕಾರ್ಯಕ್ರಮಗಳು ಹಾಗೂ ಸುಮಾಜ ಸೇವೆಯ ಉಚಿತ ನೇತ್ರಾ ಪರೀಕ್ಷೆ ಶಿಬಿರ ಕಾರ್ಯಕ್ರಮಗಳನ್ನು ಹಾಗೂ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮಗಳನ್ನು ನಮ್ಮ ಟ್ರಸ್ಟ್ ಮಾಡುತ್ತಾ ಬಂದಿದೆ ಅದೇ ರೀತಿ ಇಂದು ಕೂಡ ಸಾವಿರಕ್ಕೂ ಹೆಚ್ಚು ಬಡ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆಯನ್ನು ಮಾಡುತ್ತಿದ್ದೇವೆ ನಾವು ಯಾವುದೇ ಜಾತಿ ಮತ ಧರ್ಮ ಪಕ್ಷ ಬೇಧವಿಲ್ಲದೆ ಸಮಾ ಸಮಾಜದ ದೃಷ್ಟಿಯಿಂದ ಸಮಾಜ ಸೇವ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದೇವೆ ಎಂದರು ಹಾಗೆಯೇ ಜನರ ಸೇವೆ ಮಾಡುವುದೇ ನಮ್ಮ ಧರ್ಮ ಎಂದು ತಿಳಿಸಿದರು.

ಖ್ಯಾತ ಆಯುರ್ವೆಧಿಕ್ ವೈದ್ಯರಾದ ಡಾ. ಸಿದ್ದು ಕುಮಾರ್ ಗಂಟಿ ಮಾತನಾಡಿ ಡಾ.ಸಿ.ಜಿ.ಹಳ್ಳಿ ಮೂರ್ತಿಯವರು ಸಮಾಜದ ಬದಲಾವಣೆಯ ದೃಷ್ಟಿಯಿಂದ ಅನೇಕ ಸಾಮಾಜ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವುದು ತುಂಬಾ ಶ್ಲಾಘನೀಯ ಇಂತಹಾ ಸಾವಿರಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ತಿಳಿಸಿದರು.

ಕವಿಗಳಾದ ಗುಂಡಿಗೆರೆ ವಿಶ್ವನಾಥ್ ಮಾತನಾಡಿ ಮಕ್ಕಳು ಹೆಚ್ಚು ಶಿಕ್ಷಣದ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು ಹಾಗೆಯೇ ನಾಡಪ್ರಭು ಕೆಂಪೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ನೋಟ್ ಬುಕ್ ವಿತರಣೆ ಮಾಡುತ್ತಿರುವುದು ಉತ್ತಮ ಸಮಾಜ ಸೇವಾ ಕಾರ್ಯಕ್ರಮವಾಗಿದೆ ಇಂತಹ ಹಲವಾರು ಕಾರ್ಯಕ್ರಮಗಳನ್ನು ಮುಂದೆ ಮಾಡಲಿ ಎಂದು ತಿಳಿಸಿದರು.

ಸಮಾಜ ಸೇವಕರಾದ ಮಹೇಂದ್ರ ಮಣೋತ್ ಜೈನ್ ರವರು ಮಾತನಾಡಿ ನಾಡು ಪ್ರಭು ಕೆಂಪೇಗೌಡ ಚಾರಿಟಬಲ್ ಟ್ರಸ್ಟ್ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಇದು ಸಮಾಜ ಬದಲಾವಣೆಗೆ ಉತ್ತಮವಾದ ಬೆಳವಣಿಗೆ ಎಂದು ತಿಳಿಸಿದರು ಹಾಗೆಯೇ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸರ್ಕಾರ ಕೆಲಸಗಳನ್ನು ಪಡೆದು ಸಮಾಜ ಸುಧಾರಣೆ ಮಾಡಬೇಕು ಎಂದು ತಿಳಿಸಿದರು ಕಾರ್ಯಕ್ರಮದ ಸಂಚಾಲಕರಾದ ಜಗನ್ನಾಥ್ ರವರು ಕಾರ್ಯಕ್ರಮದ ಆಯೋಜನೆಯನ್ನು ಉತ್ತಮವಾಗಿ ಮಾಡಿದರು.

ಕಾರ್ಯಕ್ರಮದಲ್ಲಿ ಬಡ ಮಕ್ಕಳು , ತಂದೆ ತಾಯಿಗಳು ಹಾಗೂ ಪೋಷಕರು ಸೇರಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಕಾರ್ಯಕ್ರಮದಲ್ಲಿ ಜಗನ್ನಾಥ್, ಮಹೇಶ್ ಬೆಂಗಳೂರು, ಡಾ. ಸಿದ್ದು ಕುಮಾರ್ ಗಂಟಿ, ಸಮಾಜ ಸೇವಕರಾದ ಶ್ರೀ ನಿವಾಸ್, ಸಮಾಜ ಸೇವಕರಾದ ಕುಮಾರಿ ಪ್ರಿಯಾ, ಪಲ್ಲವಿ, ಮರಿಲಿಂಗಪ್ಪ, ಮುಖೋಪಧ್ಯಾಯರಾದ ರಾಜು ಸೇರಿ ಹಲವರು ಇದ್ದರು.


Share this with Friends

Related Post