ಮೈಸೂರು, ಫೆ.26: ಮೈಸೂರಿನ ಸಾವರ್ಕರ್ ಪ್ರತಿಷ್ಠಾನದ ವತಿಯಿಂದ ಇಂದು ಸಂಜೆ ಸ್ವಾತಂತ್ರ್ಯ ವೀರ ಸಾವರ್ಕರ್ ಸ್ಮೃತಿ ದಿನ ಆಚರಿಸಲಾಯಿತು.
ಮೈಸೂರಿನ ಗನ್ ಹೌಸ್ ಬಳಿಯ ಬಸವೇಶ್ವರ ಪುತ್ಥಳಿ ಮುಂಭಾಗ ಸಾವರ್ಕರ್ ನೆನಪಿನಲ್ಲಿ ಸ್ಮೃತಿ ದಿನ ಆಚರಿಸಿ ಪಂಜಿನ ಮೆರವಣಿಗೆ ಮಾಡಲಾಯಿತು.
ಚಾಮರಾಜ ಜೋಡಿ ರಸ್ತೆ ಮೂಲಕ ಸಾಗಿ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಪಂಜಿನ ಮೆರವಣಿಗೆ ಮುಕ್ತಾಯವಾಯಿತು
ಈ ವೇಳೆ ಹಿರಿಯ ನ್ಯಾಯವಾದಿಗಳಾದ ಸಿ.ವಿ ಕೇಶವಮೂರ್ತಿಯವರು ಸಾವರ್ಕರ್ ಕುರಿತು ಮಾತನಾಡಿದರು.
ವೈದ್ಯರಾದ ಡಾ|ಚಂದ್ರಶೇಖರ್, ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಯಶಸ್ವಿನಿ, ಮುಖಂಡರಾದ ರಾಕೇಶ್ ಭಟ್, ಶಿವಕುಮಾರ್, ಮೈಸೂರು ಹನುಮಂತೋತ್ಸವ ಸಮಿತಿಯ ಸಂಜಯ್, ಕುಮಾರ್, ನಗರಪಾಲಿಕೆ ಮಾಜಿ ಸದಸ್ಯರಾದ ಬಿ.ವಿ.ಮಂಜುನಾಥ್, ಬಿಜೆಪಿ ಮುಖಂಡರಾದ ಬಿ.ಎಂ.ರಘು, ವೀರ ಸಾವರ್ಕರ್ ಬಳಗದ ವಿಕ್ರಮ್ ಅಯ್ಯಂಗಾರ್, ಸಂದೇಶ ಪವಾರ್, ಜಯಸಿಂಹ, ನಿಶಾಂತ್, ಟಿ.ಎಸ್, ಅರುಣ್, ಮಧುಸೂದನ್, ರಂಗನಾಥ್, ಪ್ರತಾಪ್, ತ್ಯಾಗರಾಜ್, ರಾಜಮಣಿ, ವಿನುತಾ, ರಾ.ಪರಮೇಶ್ ಗೌಡ, ಹಿರಿಯಣ್ಣ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.