Mon. Dec 23rd, 2024

ಆಟೋ ಚಾಲಕರಿಗೆ ಅನುಕೂಲವಾದ ಮಾರ್ಸ್ ಆಪ್ ಬಿಡುಗಡೆಗೊಳಿಸಿದ ಗಣಪತಿ ಶ್ರೀಗಳು

Share this with Friends

ಮೈಸೂರು, ಜೂ.24: ಆಟೋರಿಕ್ಷಾ ಚಾಲಕರು ಸಾರ್ವಜನಿಕರಿಗೆ ಉತ್ತಮವಾದ ಸೇವೆ ನೀಡಬೇಕೆಂದು ಅವಧೂತ ದತ್ತಪೀಠದ‌ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ತಿಳಿಹೇಳಿದರು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಎಂ ಎ ಆರ್ ಎಸ್ ಆಪ್ ಲೋಕಾರ್ಪಣೆ ಮಾಡಿ ಆಟೋರಿಕ್ಷಾ ಚಾಲಕರಿಗೆ ಶುಭವಾಗಲಿ ಎಂದು ಹಾರೈಸಿದರು.

ಆಟೋರಿಕ್ಷಾ ಚಾಲಕರಿಗೆ ಹಿತವಚನಗಳನ್ನು ನೀಡಿದ ಶ್ರೀಗಳು ಸಾರ್ವಜನಿಕರಿಗೆ ಉತ್ತಮವಾದ ಸೇವೆ ನೀಡಿ ಎಂದು ತಿಳಿಸಿ,
ಈಗಿರುವ ಆಪ್ ಗಳಿಂದ ಆಟೋರಿಕ್ಷಾ ಚಾಲಕರಿಗೆ ಅನಾನುಕೂಲವಾಗುತ್ತಿದೆ ಎಂದು ಆಟೋರಿಕ್ಷಾ ಚಾಲಕರು ಹೇಳಿದ್ದಾರೆ,
ಆದ್ದರಿಂದ ಈ ಹೊಸ ಆಫ್ ಮೂಲಕ ಆಟೋರಿಕ್ಷಾ ಚಾಲಕರ ಸಾಕಷ್ಟು ಸಮಸ್ಯೆಗಳು ಬಗೆಹರಿಯಬಹುದು ಮತ್ತು ಸಾರ್ವಜನಿಕರಿಗೆ ಉತ್ತಮವಾದ ಸೇವೆಯು ಸಿಗಬಹುದು ಎಂದು ವಿಶ್ವಾಸ ಪಟ್ಟರು.

ಈ ಆಪ್ ನಲ್ಲಿ ಆರ್ ಟಿ ಒ ನಿಗದಿ ಮಾಡಿರುವ ದರ ಚಾಲ್ತಿಗೆ ಬರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗದು ಎಂದು ಶ್ರೀಗಳು ತಿಳಿಸಿದರಲ್ಲದೆ ಪ್ರತಿಯೊಬ್ಬ ಆಟೋರಿಕ್ಷಾ ಚಾಲಕರು ಆಪನ್ನು ಡೌನ್ಲೋಡ್ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಾರ್ವಜನಿಕರು ಕೂಡಾ ಮಾರ್ಸ್ ಆಪ್ ಡೌನ್ಲೋಡ್ ಮಾಡಿಕೊಂಡರೆ ಆಟೋರಿಕ್ಷಾ ಚಾಲಕರಿಗು ಅನುಕೂಲವಾಗಲಿದೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲೂ ಅನುಕೂಲವಾಗಬಹುದು ಎಂದು ಹೇಳಿದರು.

ಸಮಾರಂಭದಲ್ಲಿ ಆಟೋರಿಕ್ಷಾ ಚಾಲಕರು, ಆಟೋರಿಕ್ಷಾ ಮಾಲೀಕರು, ಮಾರ್ಸ್ ಅಸ್ತಿತ್ವಕ್ಕೆ ತರುತ್ತಿರುವ ಅಧ್ಯಕ್ಷ ಬಿ ನಾಗರಾಜು, ಮಾರ್ಸ್ ಕಾನೂನು ಸಲಹೆಗಾರ ರಾಜ್ಯ ಉಚ್ಚ ನ್ಯಾಯಾಲಯದ ವಕೀಲರಾದ ಎಂ. ಆರ್ ಸೂರ್ಯ ಕುಮಾರ್, ಮಾರ್ಸ್ ಅಪ್ಲಿಕೇಶನ್ ಪೂರ್ಣಗೊಳಿಸಿರುವ ಕ್ವಾಂಟಮ್ ಇನ್ಫೋಟೆಕ್ ಮಂಜುನಾಥ್, ಮೈಸೂರು ಆಟೋರಿಕ್ಷಾ ಮಾಲೀಕರು ಮತ್ತು ಚಾಲಕರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಂ ಲಕ್ಷ್ಮೀನಾರಾಯಣ್, ನಿರ್ದೇಶಕರುಗಳಾದ ದೊಡ್ಡ ದೇವಪ್ಪ.ದಿವ್ಯ. ಕೆಂಪರಾಜ ಅರಸ್,ಮಂಜುನಾಥ್,
ಮುನಾವರ್ ಪಾಶ,ಸೋಮ ನಾಯಕ,
ವೈ.ಟಿ ರಾಮೇಗೌಡ, ಮಹಿಳಾ ಆಟೋರಿಕ್ಷಾ ಚಾಲಕರು ಹಾಗೂ ಭಕ್ತರು‌ ಹಾಜರಿದ್ದರು.


Share this with Friends

Related Post