Tue. Dec 24th, 2024

ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್

Share this with Friends

ತುಮಕೂರು,ಮಾ.7: ಗೆಳೆಯನ ಜತೆ ಜಾತ್ರೆಗೆ ಬಂದಿದ್ದ ವಿದ್ಯಾರ್ಥಿನಿಯನ್ನು ಬೆದರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಹೇಯ ಘಟನೆ ನಡೆದಿದೆ.

ಈ ಸಂಬಂಧ ಮೂರು ಜನರನ್ನು ಬಂಧಿಸಲಾಗಿದ್ದು, ಬಂಡೇಪಾಳ್ಯ ವಾಸಿ ಬಾಗಲಕೋಟೆ ಮೂಲದ ಅಮೋಘ (22), ಹನುಮಂತ (22), ಪತಾಪ್ (20) ಬಂಧಿತ ಕಿರಾತಕರು.

ಸ್ನೇಹಿತನ ಜತೆ ಸಿದ್ಧಗಂಗಾ ಜಾತ್ರೆಗೆ ಬಂದಿದ್ದ ಪಿಯು ವಿದ್ಯಾರ್ಥಿನಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಕುಳಿತಿದ್ದಾಗ ಆರೋಪಿಗಳು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಹೆದರಿಸಿದ್ದಾರೆ.

ಬಳಿಕ ಬೈಕ್ ನಲ್ಲಿ ಬಾಲಕಿಯನ್ನು ರೂಮ್ ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಬಳಿಕ ಸಂತ್ರಸ್ತೆಯನ್ನು ಮತ್ತೆ ಮಠದ ಬಳಿ ತಂದು ಬಿಟ್ಟು ಪರಾರಿಯಾಗಿದ್ದಾರೆ.

ಈ ಸಂಬಂಧ ಕ್ಯಾತ್ಸಂದ್ರ ಪೊಲೀಸು ಪ್ರಕರಣ ದಾಖಲಿಸಿದ್ದು ಮೂವರು ಆರೋಪಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.


Share this with Friends

Related Post