Mon. Dec 23rd, 2024

ಮರಿತಿಬ್ಬೇಗೌಡರ ಗೆಲುವಿಗೆ ಶಿಕ್ಷಕರಲ್ಲಿ ಗಂಗಾಧರ್ ಮನವಿ

Share this with Friends

ಮಂಡ್ಯ,ಮೇ.28: ಐದನೇ ಬಾರಿಗೆ‌ ದಕ್ಷಿಣ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಮರಿತಿಬ್ಬೇಗೌಡರನ್ನು ಶಿಕ್ಷಕರು ಮೊದಲನೇ ಪ್ರಾಶಸ್ತ್ಯ ಮತಗಳಿಂದ ಗೆಲ್ಲಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ ಡಿ ಗಂಗಾಧರ್ ಮನವಿ ಮಾಡಿದರು.

ಕೆ.ಆರ್ ಪೇಟೆ ತಾಲ್ಲೂಕು ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಾತನಾಡಿದ ಅವರು,ಸತತ ನಾಲ್ಕು ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಹೋರಾಟದ ಮೂಲಕ ದನಿಯಾಗಿರುವ ಮರಿತಿಬ್ಬೇಗೌಡ ಅವರನ್ನು ಐದನೇ ಅವಧಿಗೆ ಆಯ್ಕೆ ಮಾಡುವುದರ ಮೂಲಕ ತಮ್ಮಗಳ ಸೇವೆ ಮಾಡಲು ಅವಕಾಶ ಮಾಡಿಕೊಡುವಂತೆ ಶಿಕ್ಷಕರಲ್ಲಿ ಮನವಿ ಮಾಡಿದರು.

ಮಾಜಿ ಶಾಸಕ ಕೆ‌ ಬಿ ಚಂದ್ರಶೇಖರ್ ಮಾತನಾಡಿ, ರಾಜ್ಯದ ಶಿಕ್ಷಕ ಸಮುದಾಯದ ಪ್ರತಿನಿಧಿಯಾಗಿ ಶಿಕ್ಷಣ ಕ್ಷೇತ್ರದ ಘನತೆ ಹಾಗೂ ಶಿಕ್ಷಕರ ಆತ್ಮಗೌರವಕ್ಕೆ ಕಿಂಚಿತ್ತೂ ಚ್ಯುತಿಯಾಗದಂತೆ ದುಡಿದಿರುವ ಮುಂದೆಯೂ ಶಿಕ್ಷಕರ ಸರ್ವ ಸಮಸ್ಯೆಗಳ ನಿವಾರಣೆಗೆ ನಿರಂಕುಶ ಮತಿಯಾಗಿ ಶ್ರಮಿಸುತ್ತಿರುವ ಮರಿತಿಬ್ಬೇಗೌಡರನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಮನವಿ ಮಾಡಿದರು.

ಟಿಎಪಿಸಿಎಂಎಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಪನಹಳ್ಳಿ ನಾಗೇಂದ್ರಕುಮಾರ್ ಮಾತನಾಡಿ ಕ್ಷೇತ್ರಕ್ಕೆ ‌ಸಂಬಂಧ ಇಲ್ಲದ ವ್ಯಕ್ತಿಯನ್ನು ಜೆಡಿಎಸ್ ಬಿಜೆಪಿ ಯಿಂದ ಘೋಷಣೆ ಮಾಡಿದ್ದಾರೆ.ಅವರು ಪದವಿಯನ್ನು ಓದಿಲ್ಲ ಅಥವಾ ಶಿಕ್ಷಕರೂ ಅಲ್ಲ,ಅವರಿಗೆ ಶಿಕ್ಷಕರ ಸಮಸ್ಯೆಗಳ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ‌ಮರಿತಿಬ್ಬೇಗೌಡ ಅವರು ನಾಲ್ಕು ಬಾರಿ ಶಿಕ್ಷಕರ ಪ್ರತಿನಿಧಿಯಾಗಿ ಕೆಲಸ ಮಾಡಿ ಐದನೇ ಬಾರಿಗೆ ಸ್ಪರ್ಧಿಸಿರುವ ಅವರನ್ನು ಮತ್ತೊಂದು ಅವಧಿಗೆ ಗೆಲ್ಲಿಸುವಂತೆ ಮನವಿ ಮಾಡಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ದೇವರಾಜು, ಶಿವಣ್ಣ, ಎಂ.ಡಿ ಕೃಷ್ಣಮೂರ್ತಿ,ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ರಾಜಯ್ಯ,ಕಲ್ಪತರು ಜಯರಾಂ,ಸಚಿವ ಚಲುವರಾಯಸ್ವಾಮಿ ಆಪ್ತ ಸಹಾಯಕ ಚೇತನಾಮಹೇಶ್,
ಮಡವಿನಕೋಡಿ ಕಾಂತರಾಜು, ಅಗ್ರಹಾರಬಾಚಹಳ್ಳಿ ಕುಮಾರ್, ಇಲಿಯಾಸ್, ಅಹ್ಮದ್,ಆಕಾಶ್ ಬೀರುವಳ್ಳಿ‌ ಅಗ್ರಹಾರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post