ಬೆಂಗಳೂರು: ಇತ್ತೀಚೆಗೆ ಹಲವು ದಿನಗಳಿಂದ ಬೆಲೆ ಏರಿಕೆಯಾಗುತ್ತಿದ್ದು, ಬೆಳ್ಳುಳ್ಳಿ ದರ ಕೂಡ ಈ ಸಾಲಿಗೆ ಬಂದಿದೆ. ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಏರಿಕೆಯಾಗಿದ್ದು, 500 ರೂ. ಗಡಿ ದಾಟಿದೆ. ಇದರೊಂದಿಗೆ ಅಡುಗೆ ಮನೆಯಿಂದ ಬೆಳ್ಳುಳ್ಳಿ ಕಣ್ಮರೆಯಾಗುವ ಪರಿಸ್ಥಿತಿ ಎದುರಾಗಿದೆ. ಕೆಲ ದಿನಗಳ ಹಿಂದೆ ಶುಂಠಿ ಬೆಲೆ ಹೆಚ್ಚಿಸಿಕೊಂಡು ಗ್ರಾಹಕರಿಗೆ ಹೊರೆಯಾಗಿತ್ತು. ಈಗ ಬೆಳ್ಳುಳ್ಳಿ ಬೆಲೆ ಏರುಗತಿಯಲ್ಲಿದೆ. ಈಗಾಗಲೇ ತರಕಾರಿ, ಬೇಳೆಕಾಳು, ಎಣ್ಣೆ ಬೆಲೆ ಗಗನಕ್ಕೇರಿದ್ದು, ಈಗ ಬೆಳ್ಳುಳ್ಳಿ ಬೆಲೆಯೂ ಹೆಚ್ಚಾಗಿರುವುದು ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ.
ಟೊಮೆಟೋ, ಈರುಳ್ಳಿ ದರ ಶತಕ ದಾಟಿದ್ದವು. ಸದ್ಯ ಗ್ರಾಹಕರಿಗೆ ಬೆಳ್ಳುಳ್ಳಿಯ ದರ ಏರಿಕೆಯಾಗಿದ್ದು, ಬರೋಬ್ಬರಿ ಅರ್ಧ ಸಾವಿರವಾಗಿದೆ. ಪ್ರತಿಯೊಂದು ಆಹಾರಕ್ಕೂ ಬೆಳ್ಳುಳ್ಳಿ ಬೇಕು. ಆದರೆ, ಈ ಬಾರಿ ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಬೆಳ್ಳುಳ್ಳಿ ಬೆಲೆ ಸರಿಯಾಗಿ ಬಂದಿಲ್ಲ. ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಬೆಳ್ಳುಳ್ಳಿ ಕೆ.ಜಿಗೆ ಹಾಪ್ ಕಾಮ್ಸ್‍ನಲ್ಲಿ 500ರ ಗಡಿ ದಾಟಿದೆ.
ನಾನೇ ಈಶ್ವರಪ್ಪನವರ ಮನೆಗೆ ಹೋಗ್ತೀನಿ ಅವರೇ ಗುಂಡು ಹೊಡೆಯಲಿ : ಡಿ.ಕೆ. ಸುರೇಶ್
ಅಕಾಲಿಕ ಮಳೆ, ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ನಾಸಿಕ್, ಪೂನಾದಿಂದ ಬರುತ್ತಿದ್ದ ಬೆಳ್ಳುಳ್ಳಿಯ ರಫ್ತು ಕಡಿಮೆಯಾಗಿದೆ. ರಾಜ್ಯದಲ್ಲಿ ಹೆಚ್ಚಾಗಿ ಬೆಳಗಾವಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿತ್ತು. ಸದ್ಯ ಅಲ್ಲಿಂದ ಕೂಡ ಈ ಬಾರಿ ಬೆಳ್ಳುಳ್ಳಿ ಬಂದಿಲ್ಲ. ಹೀಗಾಗಿ ಬೆಳ್ಳುಳ್ಳಿ ದರ ಏರಿಕೆಯಾಗಿದೆ.
ಮೆಣಸಿನಕಾಯಿ ಬೆಲೆ ಕುಸಿತ :
ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದಾಗಿ ಅಲ್ಪ ತೇವಾಂಶದಲ್ಲಿಯೇ ಬೆಳೆದ ಮೆಣಸಿನಕಾಯಿ ಬೆಲೆ ಈಗ ಕುಸಿದಿದೆ. ಇದರಿಂದ ಇಲ್ಲಿಯ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮೆಣಸಿನಕಾಯಿಗೆ ಪ್ರತಿಷ್ಠಿತ ಮಾರುಕಟ್ಟೆಯಾದ ಬ್ಯಾಡಗಿ, ಹುಬ್ಬಳ್ಳಿ, ಗದಗ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಿದ್ದನ್ನು ಕಂಡ ರೈತರು ಚಿಂತಾಕ್ರಾಂತರಾಗಿದ್ದಾರೆ. ಈ ವರ್ಷದ ಮಳೆ ಕೊರೆತೆ ನಡುವೆಯೂ ಸಾಲ ಮಾಡಿ ಬಿತ್ತನೆ ಮಾಡಿದ ರೈತನಿಗೆ ಇಳುವರಿ ಕುಂಠಿತದ ಜತೆಗೆ ಬೆಲೆಯೂ ಇಲ್ಲದಾಗಿದೆ. ಕಳೆದ ವರ್ಷ ಗುಣಮಟ್ಟದ ಮೆಣಸಿನಕಾಯಿ 60 ರಿಂದ 80 ಸಾವಿರ ರೂ.ಗೆ ಮಾರಾಟವಾಗಿತ್ತು ಎಂದು ಬೆಳೆಗಾರರು ಹೇಳುತ್ತಾರೆ.