ಮೈಸೂರು, ಜು.21: ಅವಧೂತ ದತ್ತ ಪೀಠದ
ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಯುಎಸ್ ನ ಇಲಿನಾಯಸ್ ನ ಚಿಕಾಗೋದ ನ್ಯೂ ಅರೆನಾದಲ್ಲಿ ನಡೆದ ಗೀತಾ ಉತ್ಸವ ಎಲ್ಲರ ಮನ ಸೂರೆಗೊಂಡಿತು.
ಎಸ್ ಜಿ ಎಸ್ ಗೀತಾ ಫೌಂಡೇಶನ್ ಮತ್ತು ಕೃಷ್ಣ ದತ್ತ ಹನುಮಾನ್ ದೇವಸ್ಥಾನವು ಅತಿದೊಡ್ಡ ಯುಎಸ್ ಗೀತಾ ಉತ್ಸವವನ್ನು ಆಯೋಜಿಸಿದ್ದವು.
ಎಸ್ ಜಿ ಎಸ್ ಗೀತಾ ಫೌಂಡೇಶನ್‌ನಿಂದ ನಡೆದ ಈ ಗೀತಾ ಉತ್ಸವವು ಯುಎಸ್ ನಲ್ಲಿ ಇದುವರೆಗೆ ನಡೆದಿರುವ ಭಗವದ್ಗೀತೆಯ ಅತಿ ದೊಡ್ಡ ಕಾರ್ಯಕ್ರಮ ಎಂದು ಗಣ್ಯರು ಬಣ್ಣಿಸಿದ್ದಾರೆ.
ವಿದ್ಯಾರ್ಥಿಗಳು ಕೇವಲ 10 ತಿಂಗಳಿನಲ್ಲಿ ಗೀತೆಯ ಎಲ್ಲಾ 700 ಶ್ಲೋಕಗಳನ್ನು ಕಂಠಪಾಠ ಮಾಡಿದುದು ವಿಶೇಷ.
ಎಸ್ ಜಿ ಎಸ್ ಗೀತಾ ಫೌಂಡೇಶನ್ ಮೂಲಕ, 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಗತಿಕವಾಗಿ ಪದವಿ ಪಡೆದಿದ್ದಾರೆ.
ಕಿರಿಯ ಪದವೀಧರರು 4 ವರ್ಷ ವಯಸ್ಸಿನವರು,ಹಿರಿಯ ಪದವೀಧರರು 85 ವರ್ಷ ವಯಸ್ಸಿನವರು,
2,000 ಕಂಠಪಾಠಿಗಳು 10 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರು.
1,350 ಕಂಠಪಾಠ ಮಾಡುವವರು ವಯಸ್ಕರು ಗೀತಾ ಕಲಿಕೆಯನ್ನು ಸುಗಮಗೊಳಿಸಿದರು
ಗೀತಾ ಉತ್ಸವದಲ್ಲಿ, ಸಾವಿರಾರು ಜನರು ಏಕಸ್ವರದಲ್ಲಿ ಗೀತಾ ಪಠಣ ಮಾಡಿದುದು ನ್ಯೂ ಅರೆನಾ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು
ಗಣ್ಯರಾದ ರಾಜಾ ಕೃಷ್ಣಮೂರ್ತಿ (ಕಾಂಗ್ರೆಸ್‌ಮನ್, ಇಲಿನಾಯ್ಸ್) ಮತ್ತು ಜೂಲಿಯಾನಾ ಸ್ಟಾರ್ಟನ್, ಇಲಿನಾಯ್ಸ್‌ನ ಲೆಫ್ಟಿನೆಂಟ್ ಗವರ್ನರ್, ಇಲಿನಾಯ್ಸ್ ನಗರಗಳ ಏಳು ಮೇಯರ್‌ಗಳ ಉಪಸ್ಥಿತರಿದ್ದು ಗೀತಾ ಉತ್ಸವವನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು,
ಚಿಕಾಗೋದ ನ್ಯೂ ಅರೆನಾದಲ್ಲಿ ಇಂದಿನ ಭಗವದ್ಗೀತೆ ಕಾರ್ಯಕ್ರಮವು ವಿದ್ಯಾರ್ಥಿಗಳು, ಪ್ರೇಕ್ಷಕರು ಮತ್ತು ದೊಡ್ಡ ಸನಾತನ ಧರ್ಮ ಸಮುದಾಯಕ್ಕೆ ಮಹತ್ವದ ಮೈಲಿಗಲ್ಲನ್ನು ನೀಡಿದೆ, ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಮುಖದಲ್ಲೂ ಶ್ರೀಕೃಷ್ಣನನ್ನು ಸಾಕ್ಷೀಕರಿಸುವುದು ನಿಜಕ್ಕೂ ವಿಸ್ಮಯ ಹುಟ್ಟಿಸುವಂತಿತ್ತು ಎಂದು ಬಣ್ಣಿಸಿದರು.
ಭಗವದ್ಗೀತೆಯು ನಮ್ಮ ಆತ್ಮಸಾಕ್ಷಾತ್ಕಾರದ ಪ್ರಯಾಣದಲ್ಲಿ ನಮಗೆ ಮಾರ್ಗದರ್ಶನ ನೀಡುತ್ತದೆ,ಕ್ಷಣಿಕ ಆನಂದದಿಂದ ನಿಜವಾದ, ಶಾಶ್ವತವಾದ ಸಂತೋಷವನ್ನು ನೀಡುತ್ತದೆ ಎಂದು ತಿಳಿಸಿದರು
ಭಗವದ್ಗೀತೆಯ ಈ ಉತ್ಸವ ಯುಎಸ್ ಬಹಳಷ್ಟು ಕುಟುಂಬಗಳು, ಸ್ವಯಂಸೇವಕರು ಮತ್ತು ಇಡೀ ಕಾರ್ಯಕ್ರಮದ ತಂಡದ ಸಮರ್ಪಣೆ ನನ್ನಲ್ಲಿ ಭಾವಪರವಶತೆಯನ್ನು ತುಂಬಿದೆ ಎಂದು ಶ್ರೀಗಳು ತಿಳಿಸಿದರು.
ಎಸ್ ಜಿ ಎಸ್ ಗೀತಾ ಫೌಂಡೇಶನ್ ಮುಂದಿನ ದಿನಗಳಲ್ಲಿ 100,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ ಎಂದು ಇದೇ ವೇಳೆ ಶ್ರೀಗಳು ಘೋಷಿಸಿದರು.
ಗುರು ಪೂರ್ಣಿಮಾ ಆಚರಣೆ: ಇಂದು ಗುರುಪೂರ್ಣಿಮೆ ಪ್ರಯುಕ್ತ ಪ್ರತ್ಯಕ್ಷ ಪಾದ ಪೂಜಾ ಮತ್ತು ಇತರ ಆಧ್ಯಾತ್ಮಿಕ ಚಟುವಟಿಕೆಗಳನ್ನು ಶ್ರೀ ಗಣಪತಿ ಸ್ವಾಮೀಜಿ ನೆರವೇರಿಸಿದರು.