ಮೈಸೂರು, ಮೇ.11: ಮಕ್ಕಳಿಗೆ ಆಸ್ತಿ ಮಾಡುವುದರ ಬದಲು ವಿದ್ಯಾವಂತರು, ಸಂಸ್ಕಾರವಂತರನ್ನಾಗಿ ಮಾಡಿ,ಅದೇ ದೊಡ್ಡ ಆಸ್ತಿ ಎಂದು ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷ ರವಿ ಶಾಸ್ತ್ರಿ ಹೇಳಿದರು.
ನಗರದ ಟಿ ಕೆ ಲೇಔಟ್ ನ ಶ್ರೀ ಕೃಷ್ಣ ಧಾಮದಲ್ಲಿ ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಶ್ರೀ ಕೃಷ್ಣ ಟ್ರಸ್ಟ್ ಮಕ್ಕಳಿಗೆ ಹಮ್ಮಿಕೊಂಡಿದ್ದ 15 ದಿನಗಳ ಉಚಿತ ಸಂಸ್ಕಾರ ವಾಹಿನಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜೀವನದಲ್ಲಿ ಧಾರ್ಮಿಕ ಚಿಂತನೆ ಅಗತ್ಯ, ಬಾಲ್ಯದಿಂದಲೇ ದೇವರ ಬಗ್ಗೆ ನಂಬಿಕೆ ಹಾಗೂ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು,
ಎಂದು ಹೇಳಿದರು.
ರಜಾ ದಿನಗಳಲ್ಲಿ ಮಕ್ಕಳು ಮೊಬೈಲ್, ಟಿ.ವಿಯಲ್ಲಿ ಕಳೆದು ಹೋಗುತ್ತಿದ್ದಾರೆ. ಹಾಗಾಗಿ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರದ ಬೀಜ ಬಿತ್ತಿ, ದೇಶದ ಸುಸಂಸ್ಕೃತ ಪ್ರಜೆಗಳನ್ನಾಗಿಸುವ ಉದ್ದೇಶದಿಂದ ಶಿಬಿರ ಆಯೋಜಿಸಿದ್ದೇವೆ ಎಂದು ತಿಳಿಸಿದರು.
ವಿದ್ವಾನ್ ಡಾಕ್ಟರ್ ಆನಂದ ತೀರ್ಥನಾಗ ಸಂಪಿಗೆ ಆಚಾರ್ಯ,ಶ್ರೀ ಕೃಷ್ಣ ಟ್ರಸ್ಟ್ ನ
ಪಿ ಎಸ್ ಶೇಖರ್, ಕಾರ್ಯದರ್ಶಿ ಕೆ ವಿ ಶ್ರೀಧರ್, ಶ್ರೀ ಕೃಷ್ಣ ಮಿತ್ರ ಮಂಡಳಿಯ ಅಧ್ಯಕ್ಷ ಪ್ರವೀಣ್, ಖಜಾಂಜಿ ಶ್ರೀವತ್ಸ, ಮಂಗಳ ಅಭ್ಯಂಕರ್, ಸುಧಾ ,ರಮಾದೇವಿ,
ಸಂಸ್ಕೃತ ಶಿಕ್ಷಕರಾದ ವಿದ್ವಾನ್ ಶ್ರೀಕಾಂತ್ ಆಚಾರ್ಯ, ವಿದ್ವಾನ್ ಮುಕುಂದಾಚಾರ್ಯರು, ಮನ್ಯು ಆಚಾರ್ಯ, ಅಕ್ಷಯ ಆಚಾರ್ಯ, ಸುರೇಖಾಚಾರ್ಯ ಮತ್ತಿತರರು ಹಾಜರಿದ್ದರು.