Mon. Dec 23rd, 2024

ಗುರುವಿನ ಕೃಪೆ ಇಲ್ಲದೆ ಗುರಿ ಮುಟ್ಟಲು ಸಾಧ್ಯವಿಲ್ಲ:ದತ್ತ ವಿಜಯಾನಂದ ತೀರ್ಥ ಶ್ರೀ

Share this with Friends

ಮೈಸೂರು, ಜು.21: ಗುರುವಿನ ಕೃಪೆ ಇಲ್ಲದೆ ನಾವು ಯಾವುದೇ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ, ಹಾಗಾಗಿ ಪ್ರತಿನಿತ್ಯ ಗುರು ಸ್ಮರಣೆ ಮಾಡಬೇಕು ಎಂದು ಅವದೂತ ಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು.

ಅವಧೂತ ದತ್ತ ಪೀಠದ ಪ್ರಾರ್ಥನಾ ಮಂದಿರದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಪೂಜಾ ಕಾರ್ಯಗಳನ್ನು ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿ ಶ್ರೀಗಳು ಮಾತನಾಡಿದರು.

ನಮ್ಮ ಗುರಿ ಮುಟ್ಟಲು ಭಕ್ತಿ,ಶ್ರದ್ಧೆ ಇರಬೇಕು ಅಂತವರಿಗೆ ಮಾತ್ರ ಗುರು ಕೃಪೆ ಸಿಗುತ್ತದೆ ಎಂದು ತಿಳಿಸಿದರು.

ಇಂದು ವ್ಯಾಸ ಪೂರ್ಣಿಮೆ, ಆ ಭಗವಂತನೇ ವೇದವ್ಯಾಸರ ರೂಪದಲ್ಲಿ ಇಳಿದುಬಂದು ನಮಗೆ ಜ್ಞಾನವನ್ನು ನೀಡಿದ್ದಾನೆ, ಇದು ನಿಜಕ್ಕೂ ಒಂದು ಚಮತ್ಕಾರ. ಎಲ್ಲವೂ ಇರುತ್ತದೆ ಆದರೆ ಜ್ಞಾನವೇ ಇಲ್ಲದಿದ್ದರೆ ಏನೂ ಪ್ರಯೋಜನ ಆಗಲಾರದು, ಒಂದು ವಜ್ರವನ್ನು‌ ಮಗುವಿನ ಕೈಗೆ ಕೊಟ್ಟರೆ ಅದು ಚೆಂಡೆಂದು ಆಟವಾಡುತ್ತದೆ, ಅದೇ ವಜ್ರವನ್ನು ಬಲ್ಲವರಿಗೆ ಕೊಟ್ಟರೆ ಅದರ ಸದುಪಯೋಗ ಹೇಗೆ ಮಾಡಿಕೊಳ್ಳಬೇಕು ಎಂದು ತಿಳಿಸಿಕೊಡುತ್ತಾರೆ ಎಂದು ಉದಾಹರಣೆ ಸಹಿತ ವಿವರಿಸಿದರು.

ಗುರುವಿನ ಮೂಲಕ ಜ್ಞಾನ ಸಂಪಾದನೆ ಮಾಡಬೇಕು ಗುರು ಇಲ್ಲದೆ ಗುರಿ ಮುಟ್ಟಲು ಖಂಡಿತ ಸಾಧ್ಯವಿಲ್ಲ ಹಾಗಾಗಿ ಗುರುಸ್ಮರಣೆ ನಿರಂತರವಾಗಿರಬೇಕು. ನಾವು ಈ ದಿನ ವೇದವ್ಯಾಸರನ್ನು ಸ್ಮರಿಸಬೇಕು ಜ್ಞಾನ ಪ್ರತಿಯೊಬ್ಬರಿಗೂ ಬೇಕೇ ಬೇಕು ನಮಗೆಲ್ಲರಿಗೂ ಶ್ರೀ ಕೃಷ್ಣನೇ ಮೊದಲ ಗುರು. ಯುದ್ಧ ಮಾಡಿಸಿದ ಕೃಷ್ಣ ಬೇರೆ, ಗೀತ ಬೋಧನೆ ಮಾಡಿದ ಕೃಷ್ಣ ಬೇರೆ ಎಂದು ನಾವು ತಿಳಿದಿದ್ದೇವೆ ಆದರೆ ಅದೆಲ್ಲ ಮಾಯೆ ಇಬ್ಬರೂ ಕೃಷ್ಣನ್ನು ಒಂದೇ. ಧರ್ಮ ಸಂರಕ್ಷಣೆಗೆ ಕೃಷ್ಣ ಯುದ್ಧ ಮಾಡಿದ ಜ್ಞಾನ ಸಂಪಾದನೆಗೆ ಗೀತ ಬೋಧನೆ ಮಾಡಿದ ಎಂದು ವಿವರಿಸಿದರು.

ಇಂದು ಚಿಕಾಗೋದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳವರು 8,000 ಮಂದಿಯಿಂದ ಗೀತ ಪಠನ ಮಾಡಿಸಿದ್ದಾರೆ, ಇದೊಂದು ಅದ್ಭುತ ಕ್ಷಣ ಈ ಈ ಕಲಿಯುಗದಲ್ಲೂ ಗುರುವಿನ ಕೃಪೆಯಿಂದ ಇಂತಹದ್ದನ್ನು ಮಾತ್ರ ಮಾಡಲು ಸಾಧ್ಯವಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

ನಮ್ಮ ಸನಾತನ ಧರ್ಮ ಕಾಪಾಡಲು ಗುರು ಕೃಪೆ ಬೇಕೇ ಬೇಕು, ಭಗವಂತನಿಗೆ ದೊಡ್ಡವರು ಚಿಕ್ಕವರು ಎಂಬ ಬೇಧ ಇಲ್ಲ ಜ್ಞಾನವನ್ನು ಯಾವುದೇ ಕಾರಣಕ್ಕೂ ನಾವು ಮರೆಯಬಾರದು ಅದೇ ಗುರಿ ಆ ಗುರಿ ಮುಟ್ಟಲು ನಮಗೆಲ್ಲ ಜ್ಞಾನ ಮಾರ್ಗವೇ ಮುಖ್ಯ.

ವೇದಾಂತ, ವೈರಾಗ್ಯದಿಂದ ಮಾತ್ರ ಮಾನವನ ಉದ್ಧಾರ ಸಾಧ್ಯ ಹಾಗಾಗಿ ವೇದವ್ಯಾಸರನ್ನು ಮರೆಯಬಾರದು ಅದೇ ರೀತಿ ಶಂಕರಾಚಾರ್ಯರನ್ನು ನಾವು ಮರೆಯಬಾರದು ಅವರು ಇಲ್ಲದಿದ್ದರೆ ಭಗವದ್ಗೀತೆಯೇ ಇರುತ್ತಿರಲಿಲ್ಲ.

ಗುರುಕೃಪೆಯಿಂದ ಅನುಭವ ಬರುತ್ತದೆ ನಮಗೆ ಗುರು ಕೃಪೆ ಸಿಗುತ್ತದೆ ಸ್ಮರಣೆ ಇದ್ದಲ್ಲಿ ಮರಣದ ಭಯ ಇರುವುದಿಲ್ಲ ನಿರಂತರ ಭಗವಂತನ ಸ್ಮರಣೆ ಮಾಡಲು ಚಾತುರ್ಮಾಸ್ಯ ಅತ್ಯುತ್ತಮ.

ಯಾರು ಬೇಕಾದರೂ ಚಾತುರ್ಮಸ್ಯ ವ್ರತ ಮಾಡಬಹುದು‌ ನೀವು ಮಾಡಿ ನಾವೀಗ ಮೈಸೂರಿನಲ್ಲಿ ಮೈಸೂರಿನಲ್ಲೇ ಇಂದಿನಿಂದ ಚಾತುರ್ಮಾಸ್ಯ ವ್ರತ ಕೊಂಡಿದ್ದೇವೆ ನೀವು ಒಂದಲ್ಲ ಒಂದು ಅಂದರೆ ಕ್ಷೀರ ವ್ರತ, ಕ್ಷಾರ ವ್ರತವನ್ನು ಈ ಮಾಸಗಳಲ್ಲಿ ಮಾಡಬಹುದು ಎಂದು ಶ್ರೀ ವಿಜಯಾನಂದ ತೀರ್ಥ ಸ್ವಾಮೀಜಿ ಸಲಹೆ ನೀಡಿದರು.

ಇದೇ ವೇಳೆ ಶತಶ್ಲೋಕಿ ರಾಮಾಯಣ ಬ್ರೈಲ್ ಲಿಪಿಯಲ್ಲಿ ತೆಲುಗು ಮತ್ತು ಕನ್ನಡ ಭಾಷೆಯ ಪುಸ್ತಕಗಳನ್ನು ಶ್ರೀಗಳು ಮತ್ತು ಶಾಸಕ ಟಿ. ಎಸ್ ಶ್ರೀವತ್ಸ ಬಿಡುಗಡೆ ಮಾಡಿದರು.

ಮುಂಜಾನೆಯಿಂದಲೇ ಗುರುಪೂರ್ಣಿಮೆ ಪ್ರಯುಕ್ತ ಶ್ರೀ ದತ್ತ ವಿಜಯಾನಂದ ತೀರ್ಥ‌ ಸಾಮೀಜಿಯವರು ಧಾರ್ಮಿಕ ‌ವಿಧಿವಿಧಾನಗಳನ್ನು ನೆರವೇರಿಸಿದರು.

ಶ್ರೀ ‌ವೆಂಕಟೇಶ್ವರ‌ ಸನ್ನಿಧಿ ಮತ್ತು ‌ಕಾರ್ಯಸಿದ್ದಿ ಹನುಮಾನ್ ಮಂದಿರಗಳಲ್ಲಿ ಪೂಜೆ ನೆರವೇರಿಸಿ ನಂತರ ಶ್ರೀ ಗುರು ದತ್ತಾತ್ರೇಯ ಸ್ವಾಮಿಯ‌ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ‌ದತ್ತ ಮಂದಿರಕ್ಕೆ ಕಿರಿಯ ಶ್ರೀಗಳ ನೇತೃತ್ವದಲ್ಲಿ ‌ತರಲಾಯಿತು.

ಗೋಪೂಜೆ ನೆರವೇರಿಸಿದ ನಂತರ ಶ್ರೀ ದತ್ತ ವಿಜಯಾನಂದ ತೀರ್ಥ‌ ಸಾಮೀಜಿಯವರು ಪ್ರಾರ್ಥನಾ ಮಂದಿರದಲ್ಲಿರುವ ಎಲ್ಲಾ ದೇವರುಗಳಿಗೂ ಪೂಜೆ ಸಲ್ಲಿಸಿದರು.

ತದನಂತರ ಸಂಕಲ್ಪ ಮಾಡಿ‌ ಭಕ್ತ ರಿಂದಲೂ‌ ಸಂಕಲ್ಪ ಮಾಡಿಸಿ‌ದರು.ಗುರು ಬ್ರಹ್ಮ ಗುರುವಿಷ್ಣು ಗುರುದೇವೊ ಮಹೇಶ್ವರಃ ಮಂತ್ರವನ್ನು ಎಲ್ಲರೂ ಶ್ರದ್ಧೆ, ಭಕ್ತಿಯಿಂದ ಪಠಿಸಬೇಕೆಂದು ಶ್ರೀಗಳು ತಿಳಿಸಿದರು.

ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿಯವರ 21 ನೇ ಚಾತುರ್ಮಾಸ್ಯ‌ ವ್ರತದೀಕ್ಷಾ ಮಹೋತ್ವವವೂ ಕೂಡಾ ನೆರವೇರಿತು.

ರಾಜ್ಯ,ಹೊರ ರಾಜ್ಯಗಳಿಂದಲೂ ನೂರಾರು ಭಕ್ತರು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ‌ಆಗಮಿಸಿ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‌ಭಕ್ತಿ ಸಮರ್ಪಿಸಿದರು.


Share this with Friends

Related Post