ಮೈಸೂರು, ಏ.26: ಬೆಂಗಳೂರಿನ ಜನರಿಗೆ ಏನಾಗಿದೆಯೊ ತಿಳಿಯದು ಈ ಬಾರಿ ಕೂಡಾ ನೀರಸ ಮತದಾನವಾಗಿದೆ.
ಮೈಸೂರಿನಲ್ಲೇ ಎಷ್ಟೋ ವಾಸಿ,ಬೆಳಿಗ್ಗೇನೆ ಯುವಜನತೆ ನಾಚುವಂತೆ ಹಿರಿಯ ನಾಗರೀಕರು,ವಿಕಲಚೇತನರು ಅಂಧರು ಹುಮ್ಮಸಿನಿಂದ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.
ಆದರೆ ಬೆಂಗಳೂರಲ್ಲಿ ಮಾತ್ರ ಮತದಾರರು ಮತಗಟ್ಟೆ ಕಡೆ ಮುಖ ಮಾಡಲಿಲ್ಲ,45%ಗೆ ತೃಪ್ತಿ ಪಟ್ಟುಕೊಳ್ಳಬೇಕು ಅಷ್ಟೇ.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಜಕ್ಕೂ ಭರ್ಜರಿ ಮತದಾನವಾಗಿದೆ.7 ಗಂಟೆಗೆ ಮತದಾನ ಪ್ರಕ್ರಿಯೆ ಪ್ರಾರಂಭವಾದಕೂಡಲೆ ಅತೀ ಉತ್ಸಾಹದಿಂದಲೇ ಜನ ಕಿಕ್ಕಿರಿದು ತುಂಬಿದ್ದರು.
ತಮ್ಮ ಬೂತ್ ಯಾವುದು ಎಂಬುದನ್ನು ತಿಳಿದುಕೊಂಡು ಮತ ಚಲಾಯಿಸಲು ಉತ್ಸಾಹ ತೋರಿದರು.
ಬೋಗಾದಿ,ಕೆ.ಆರ್.ಮಿಲ್ ಕಾಲೊನಿ,ಚಾಮರಾಜ ಕ್ಷೇತ್ರದ ಸಿದ್ದಾರ್ಥ ನಗರ,ನರಸಿಂಹರಾಜ ಕ್ಷೇತ್ರ ಹೀಗೆ ಎಲ್ಲಾ ಕಡೆ ಜನ ಉತ್ತಮ ಪ್ರತಿಕ್ರಿಯೆ ತೋರಿದರು.
ಬೆರಳೆಣಿಕೆ ಮತಗಟ್ಟೆಗಳಲ್ಲಿ ಸ್ವಲ್ಪ ಕಿರಿಕ್ ಆಗಿದ್ದು ಬಿಟ್ಟರೆ ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಶಾಂತಿಯುತ ಮತದಾನವಾಗಿದೆ.