Mon. Dec 23rd, 2024

ರಂಗಾಯಣದಲ್ಲಿ‌ ಬಂಜಾರ ಸಮುದಾಯದಗೋರ್‌ಮಾಟಿ ಮಾ.16,17 ರಂದು ಪ್ರದರ್ಶನ

Share this with Friends

ಮೈಸೂರು.ಮಾ.14: ರಂಗಾಯಣವು ಬಂಜಾರ ಸಮುದಾಯದ ಅಸ್ಮಿತೆಯ ಕಾವ್ಯಕಥನ ‘ಗೋರ್‌ಮಾಟಿ’ ಪ್ರದರ್ಶನ ಕೊಡಲು ಸಿದ್ದವಾಗಿದೆ.

ಈ ಕುರಿತು ರಂಗಾಯಣದಲ್ಲಿ ಸುದ್ದಿಗೋಷ್ಠಿಯಲ್ಲಿ ಹಿರಿಯ ರಂಗಕರ್ಮಿ ಶ್ರೀ ಬಸವಲಿಂಗ ಅವರು ಮಾಹಿತಿ ನೀಡಿದರು.

ಮಾ.16 ಮತ್ತು 17 ರಂದು ಮೊದಲ ಪ್ರಯೋಗ ಪ್ರದರ್ಶನವಾಗುತ್ತಿದ್ದು, ಆ ನಂತರ ವಾರಾಂತ್ಯ ಮಾ. 22, 23, 24, ಹಾಗೂ 29, 30, 31 ರಂದು ಪ್ರದರ್ಶನಗೊಳ್ಳುತ್ತಿದೆ ಎಂದು ಅವರು ಹೇಳಿದರು.

ಬೇರೆ ಬೇರೆ ಸಮುದಾಯಕ್ಕೆ ಸೇರಿದ ಕಲಾವಿದರು ಈ ನಾಟಕದಲ್ಲಿ ಅಭಿನಯಿಸುತ್ತಿದ್ದು ಲಂಬಾಣಿ ಸಂಸ್ಕೃತಿಯನ್ನು ವಿವಿಧ ಆಕಾರ ಗ್ರಂಥಗಳು ಮತ್ತು ಸಮುದಾಯದ ನಾಯಕರಿಂದ ತಿಳಿದುಕೊಂಡು ಅಭಿನಯಿಸಿದ್ದಾರೆ ಎಂದು ಅವರು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು ಇತ್ತೀಚಿನ ಸಭೆಯೊಂದರಲ್ಲಿ ಲಂಬಾಣಿ ಜನಾಂಗದ ಕುರಿತು ನಾಟಕ ಮಾಡುವಂತೆ ಸೂಚಿಸಿದ್ದರು ಅದರಂತೆ ಈ ನಾಟಕ ರಂಗರೂಪಕ್ಕೆ ಬರುತ್ತಿದೆ ಎಂದು ಬಸವ ಲಿಂಗಯ್ಯ ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್ ಮಲ್ಲಿಕಾರ್ಜುನ, ರಂಗಾಯಣದ ಉಪ ನಿರ್ದೇಶಕರಾದ ನಿರ್ಮಲ ಮಠಪತಿ, ರಂಗಕರ್ಮಿ ಎಚ್.ಎಸ್ ಉಮೇಶ್ ಉಪಸ್ಥಿತರಿದ್ದರು.


Share this with Friends

Related Post