Tue. Dec 24th, 2024

ಪ್ರಜ್ವಲ್ ರೇವಣ್ಣ ಸುಳಿವು ಸಿಕ್ಕಿದೆ:ಪರಮೇಶ್ವರ್

Share this with Friends

ಬೆಂಗಳೂರು, ಮೇ.5: ಸಂಸದ ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎಂಬ ಸುಳಿವು ಸಿಕ್ಕಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈಗಾಗಲೇ ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೊಟೀಸ್ ಜಾರಿಯಾಗಿದೆ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಎಸ್ಐಟಿ ಅಧಿಕಾರಿಗಳಿಗೆ ಸಿಕ್ಕಿದೆ ಎಂದು ತಿಳಿಸಿದರು.

ಹೆಚ್.ಡಿ. ರೇವಣ್ಣ ಅವರ ಮೊಬೈಲ್ ಲೊಕೇಶನ್ ಆಧರಿಸಿ ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ ನಂತರ ಎಸ್ಐಟಿ ಅಧಿಕಾರಿಗಳು ವಿದೇಶದಲ್ಲಿರುವ ಅವರನ್ನು ಕರೆತರಲು ಕ್ರಮ ಕೈಗೊಳ್ಳಲಿದ್ದಾರೆ‌ ಎಸ್ಐಟಿ ಅಧಿಕಾರಿಗಳಿಗೆ ಎಲ್ಲ ಸಹಕಾರವನ್ನು ಸರ್ಕಾರ ನೀಡಲಿದೆ ಎಂದು ಸ್ಪಷ್ಟಪಡಿಸಿದರು.

ನಿಯಮಾನಸಾರವೇ ಕಾನೂನು ಪ್ರಕಾರ ಎಲ್ಲವನ್ನು ಎಸ್ಐಟಿ ನಡೆಸಬೇಕೆಂದು ಸರ್ಕಾರ ಸೂಚಿಸಿದೆ.ಆದರೆ ತನಿಖೆಯ ಮಾಹಿತಿಗಳು ನಮಗೆ ಲಭ್ಯವಿರುವುದಿಲ್ಲ ಹಾಗಾಗಿ ನಾನು ಇದರ ಬಗ್ಗೆ ಹೆಚ್ಚು ಏನನ್ನು ಮಾತನಾಡಲು ಸಾಧ್ಯವಿಲ್ಲ,ಎಸ್ಐಟಿ ಕ್ರಮ ಕೈಗೊಳ್ಳುತ್ತದೆ ಎಂದು ಪರಮೇಶ್ವರ್ ತಿಳಿಸಿದರು.


Share this with Friends

Related Post