ನವದೆಹಲಿ: ಭಾರತ ಮತ್ತು ಮಯನ್ಮಾರ್ ಗಡಿಯಲ್ಲಿ ಕಟ್ಟುನಿಟ್ಟಿನ ಕಣ್ಗಾವು ಇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸಂಪೂರ್ಣ 1643 ಕಿಲೋಮೀಟರ್ ಉದ್ದದ ಗಡಿಯಲ್ಲಿ ಬೇಲಿ ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಒಟ್ಟು ಗಡಿ ಉದ್ದದ ಪೈಕಿ ಮಣಿಪುರದ ಮೋರೆಯಲ್ಲಿ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈಗಾಗಲೇ ಬೇಲಿ ಹಾಕಲಾಗಿದೆ ಎಂದು ಅಮಿತ್ ಶಾ ಹೇಳಿದ್ದು, ಇಡೀ ಗಡಿಯುದ್ದಕ್ಕೂ ಬೇಲಿ ಹಾಕಲಾಗುವುದು ಎಂದಿದ್ದಾರೆ.
ಬೇಲಿ ಹಾಕುವು ಮಾತ್ರವಲ್ಲದೇ ಉತ್ತಮ ಕಣ್ಗಾವಲಿಗೆ ಅನುಕೂಲವಾಗುವಂತೆ ಗಡಿಯಲ್ಲಿ ಗಸ್ತು ಟ್ರಾಕ್ ಅನ್ನು ಸಹ ಸುಗಮಗೊಳಿಸಲಾಗುವುದು ಎಂದು ಅವರು ಹೇಳಿದರು.ಹೈಬ್ರಿಡ್ ಕಣ್ಗಾವಲು ವ್ಯವಸ್ಥೆ (HSS) ಮೂಲಕ ಫೆನ್ಸಿಂಗ್‌ನ ಎರಡು ಪ್ರಾಯೋಗಿಕ ಯೋಜನೆಗಳು ಕಾರ್ಯಗತಗೊಳ್ಳುತ್ತಿವೆ. ಯೋಜನೆಗಳ ಅಡಿಯಲ್ಲಿ, ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲಿ ತಲಾ ಒಂದು ಕಿಲೋಮೀಟರ್ ವಿಸ್ತಾರದಲ್ಲಿ ಬೇಲಿ ಹಾಕಲಾಗುವುದು ಎಂದು ಶಾ ಹೇಳಿದ್ದಾರೆ.
ಹೆಲಿಕಾಪ್ಟರ್ ಅಪಘಾತದಲ್ಲಿ ಚಿಲಿಯ ಮಾಜಿ ಅಧ್ಯಕ್ಷ ದುರಂತ ಸಾವು
ಹೆಚ್ಚುವರಿಯಾಗಿ, ಮಣಿಪುರದಲ್ಲಿ ಸುಮಾರು ಇಪ್ಪತ್ತು ಕಿಲೋಮೀಟರ್‌ಗಳ ಬೇಲಿ ಕಾಮಗಾರಿಗೆ ಅನುಮೋದನೆ ನೀಡಲಾಗಿದ್ದು, ಶೀಘ್ರದಲ್ಲೇ ಕೆಲಸ ಪ್ರಾರಂಭವಾಗಲಿದೆ. ಯಾರಿಗೂ ನುಸುಳಲು ಸಾಧ್ಯವಾಗದಂತೆ ಗಡಿಗಳನ್ನು ನಿರ್ಮಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಅಮಿತ್ ಶಾ ಪುನರುಚ್ಛರಿಸಿದ್ದಾರೆ.