Wed. Dec 25th, 2024

ಶ್ರೀ ಶಂಕರಾಚಾರ್ಯರ ಭವ್ಯ ಮೆರವಣಿಗೆ

Share this with Friends

ಮೈಸೂರು,ಮೇ.13: ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಅಂಗವಾಗಿ ಅಗ್ರಹಾರದಲ್ಲಿರುವ ಅಭಿನವ ಶಂಕರಾಲಯ ಶಂಕರ ಮಠದಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.

ಶ್ರೀ ಶಂಕರನ ಸನ್ನಿಧಿಯಲ್ಲಿ ರುದ್ರಾಭಿಷೇಕ, ವೇದಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ನವಗ್ರಹ ಜಪ ಇತ್ಯಾದಿಗಳು ನೆರವೇರಿದವು.

ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.ಸಂಜೆ ಶಂಕರ ಮಠದಿಂದ ಮುಖ್ಯ ರಸ್ತೆಯಲ್ಲಿ ಸಾಗಿ ಉತ್ತರಾದಿ ಮಠದ ರಸ್ತೆ ಮಾರ್ಗವಾಗಿ ನಾದಸ್ವರ ಹಾಗೂ ಭಜನೆ ಮೂಲಕ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಯಿತು.

ಶಾಸಕರಾದ ಟಿ ಎಸ್ ಶ್ರೀವತ್ಸ,
ಶಂಕರ ಮಠದ ಧರ್ಮಾಧಿಕಾರಿ ರಾಮಚಂದ್ರ, ವ್ಯವಸ್ಥಾಪಕರಾದ ಶೇಷಾದ್ರಿ ಭಟ್, ಸಪ್ತ ಮಾತ್ರಿಕ ದೇವಸ್ಥಾನದ ಧರ್ಮಾಧಿಕಾರಿ ಭಾಸ್ಕರ್, ಮೈಸೂರ್ ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್, ನಗರ ಪಾಲಿಕೆ ಮಾಜಿ ಸದಸ್ಯರಾದ ಬಿ ವಿ ಮಂಜುನಾಥ್, ಅಚ್ಯುತ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಕೆ ಎಂ ನಿಶಾಂತ್, ಹೊಯ್ಸಳ ಕರ್ನಾಟಕದ ನಿರ್ದೇಶಕ ರಂಗನಾಥ್, ಪ್ರಶಾಂತ್, ಎಂ ಆರ್ ಬಾಲಕೃಷ್ಣ, ಜ್ಯೋತಿ, ಶ್ರೀಕಾಂತ್ ಕಶ್ಯಪ್, ಮೀನಾ, ಹರೀಶ್ , ಸುಚಿಂದ್ರ, ಸುಧೀಂದ್ರ‌ ಮತ್ತಿತರರು ಪಾಲ್ಗೊಂಡಿದ್ದರು.


Share this with Friends

Related Post