Mon. Dec 23rd, 2024

ಹೆಚ್.ಡಿ.ದೇವೇಗೌಡರು‌ ಆಸ್ಪತ್ರೆಗೆ ದಾಖಲು

Share this with Friends

ಬೆಂಗಳೂರು, ಫೆ.15: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದೊಡ್ಡ ಗೌಡರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ‌ ಬಗ್ಗೆ ಮಣಿಪಾಲ್ ಆಸ್ಪತ್ರೆಯ ತಜ್ಞ ಹಿರಿಯ ವೈದ್ಯರಾದ‌ ಡಾ.ಸತ್ಯನಾರಾಯಣ ಅವರು ಮಾಹಿತಿ ನೀಡಿದ್ದಾರೆ.

ದೇವೇಗೌಡರ ಚಿಕಿತ್ಸೆಗಾಗಿ ಒಂದು ತಂಡವನ್ನೇ ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ,ಇನ್ನು ಎರಡು,ಮೂರು ದಿನಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ದೇವೇಗೌಡರಿಗೆ ಜನರಲ್‌ ವಾರ್ಡ್ ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ,ಅವರಿಗೆ‌ ಇನ್ಫೆಕ್ಷನ್ ಆಗಿದೆ,ಆರೋಗ್ಯ ಸ್ಥಿರವಾಗಿದೆ‌ ಎಂದೂ ವೈದ್ಯರು ‌ತಿಳಿಸಿದ್ದಾರೆ.

ದೇವೇಗೌಡರು ಉಸಿರಾಟದ ಸಮಸ್ಯೆಯಿಂದ ಅಡ್ಮಿಟ್ ಆಗಿದ್ದಾರೆ. ರೆಸ್ಪಿರೇಟರಿ ಇನ್ಫೆಕ್ಷನ್ ಆಗಿದೆ. ಎರಡು-ಮೂರು ದಿನದಿಂದ ಇನ್ಫೆಕ್ಷನ್ ಆಗಿದೆ,ಚಿಕಿತ್ಸೆ ನೀಡುತ್ತಿದ್ದೇವೆ ಪರಿಸ್ಥಿತಿ ನೋಡಿಕೊಂಡು ಡಿಸ್ಚಾರ್ಜ್ ಮಾಡುತ್ತೇವೆ ಎಂದು ಡಾ.ಸತ್ಯನಾರಾಯಣ ‌ಸ್ಪಷ್ಟಪಡಿಸಿದ್ದಾರೆ.


Share this with Friends

Related Post