Mon. Dec 23rd, 2024

ಸಿದ್ದರಾಮಯ್ಯ ವಿರುಧ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ

Share this with Friends

ಮೈಸೂರು,ಏ.3: ಸಿದ್ದರಾಮಯ್ಯ ಅವರಿಗೆ ಯಾವಾಗಲೂ ದೇವೇಗೌಡರ ಭಜನೆ ಮಾಡುವುದೆ ಕೆಲಸ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಮೈಸೂರಿನಲ್ಲಿ‌ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಸಿಎಂ ಜವಾಬ್ದಾರಿ ಜೊತೆಗೆ ಜ್ಯೋತಿಷ್ಯ ಕೂಡ ಕಲಿತಿರಬೇಕು,ಅವರು ಈಗ ದೊಡ್ಡ ಜ್ಯೋತಿಷಿ ಆಗಿದ್ದಾರೆ ಎಂದು ವ್ಯಂಗ್ಯ ವಾಡಿದರು.

ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಇದ್ದಾಗ ನಾವು
ಮೈತ್ರಿ ಧರ್ಮ ಪಾಲನೆ ಮಾಡಿದ್ದೇವೆ,
ನಾನು ಮೈತ್ರಿ ಧರ್ಮ ಮುರಿದಿದ್ದರೆ ಕಾಂಗ್ರೆಸ್ ಗೆ ಒಂದು ಸ್ಥಾನವೂ ಬರುತ್ತಿರಲಿಲ್ಲ,
ನಾನು ಮೈತ್ರಿ ಧರ್ಮ ಪಾಲನೆ ಮಾಡಬೇಡಿ ಅಂತಾ ಹೇಳಿದ್ದರೆ ಕಳೆದ ಬಾರಿಯೆ ಬಿಜೆಪಿ ಬೆಂಗಳೂರು ಗ್ರಾಮಾಂತರದಲ್ಲಿ ಗೆಲ್ಲುತ್ತಿತ್ತು,
ನಮ್ಮ ಭದ್ರ ಕೋಟೆಗೆ ಕಾಂಗ್ರೆಸ್ ನುಗ್ಗಲು ಆಗ ನಾನೇ ಅವಕಾಶ ಮಾಡಿಕೊಟ್ಟು ಬಿಟ್ಟೆ ಎಂದು ಪಶ್ಚಾತ್ತಾಪ ಪಟ್ಟರು ಹೆಚ್ ಡಿ ಕೆ.

ಆಗ ಸಾಲ ಮಾಡಿ ಪಕ್ಷ ಸಂಘಟನೆ ಮಾಡಿದ್ದು ನಾವು. ಪೆಂಡಾಲ್ ಹಾಕಿ ವೇದಿಕೆ ಹಾಕಿದ್ದು ನಾವು ಬಂದು ಭಾಷಣ ಮಾಡಿ ಹೋಗ್ತಾ ಇದ್ದಿದ್ದು ಸಿದ್ದರಾಮಯ್ಯ,
ಜೆಡಿಎಸ್ ಸಂಘಟನೆಗೆ ಸಿದ್ದರಾಮಯ್ಯ ಯಾವತ್ತು ಸಾಲ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಹೆಚ್.ಡಿ. ದೇವೇಗೌಡರು ಪ್ರತಾಪ್ ಸಿಂಹ ಟಿಕೆಟ್ ತಪ್ಪಿಸಿದ್ರು ಎಂಬುದು
ಜಗತ್ತಿನ ಎಂಟನೇ ಅದ್ಛುತ,
2004 ರಲ್ಲೇ ಬಿಜೆಪಿಯ ಅರುಣ್ ಜೆಟ್ಲಿ ನನಗೆ ಸಿಎಂ ಆಫರ್ ಕೊಟ್ಟಿದ್ದರು ಆಗ ಸಿದ್ದರಾಮಯ್ಯ ರನ್ನು ಬಿಜೆಪಿ ಕೇಳಿರಲಿಲ್ಲ ಎಂದು ಟಾಂಗ್ ನೀಡಿದರು.

ಚಾಮುಂಡೇಶ್ವರಿ ಕ್ಷೇತ್ರಕ್ಕೆ
ಇವರು ಏನೂ ಕಡಿದು ಕಟ್ಟೆ ಹಾಕಿದ್ದಾರೆ ಮೊದಲು ಅದನ್ನು ಹೇಳಲಿ,
ಬಾದಾಮಿ ಕ್ಷೇತ್ರಕ್ಕೆ ಏನು ಕೊಟ್ಟರು ಎಂದು ಮಾಜಿ ಸಿಎಂ ಪ್ರಶ್ನಿಸಿದರು.

ಯಡಿಯೂರಪ್ಪ ಅವರಿಗೆ ಅವತ್ತು ನಮ್ಮ ಸರಕಾರ ಬೀಳಿಸಲು ಸಹಾಯ ಮಾಡಿದ್ದು ಯಾರು,ಅದರಲ್ಲಿ ಸಿದ್ದರಾಮಯ್ಯ
ಚಿತಾವಣೆ ಇರಲಿಲ್ವಾ. ಸಿದ್ಧವನದಲ್ಲಿ ಸಿದ್ಧ ಔಷಧ ಸಿದ್ದ ಮಾಡಿದ್ದು ಯಾರು ಎಂದು ಕುಮಾರಸ್ವಾಮಿ ಕಾರವಾಗಿ‌ ತರಾಟೆಗೆ ತೆಗೆದುಕೊಂಡರು.

ಸಿದ್ದರಾಮಯ್ಯ ಮಾತಲ್ಲಿ ಬರೀ ಗರ್ವ ತುಂಬಿರುತ್ತದೆ,
ವಿಧಾನಾಸೌಧದಲ್ಲೆ ಮೈಸೂರು ಪೈಲ್ವಾನ್ ಥರ ತೊಡೆ ತಟ್ಟಿ ಗರ್ವ ತೋರಿಸಿದ್ದು ಯಾರು ಎಂದು ಕಟುವಾಗಿ ಟೀಕಿಸಿದರು.


Share this with Friends

Related Post