Mon. Dec 23rd, 2024

ಎಚ್.ಡಿ.ರೇವಣ್ಣ ಟೆಂಪಲ್ ರನ್

Share this with Friends

ಹಾಸನ,ಜೂ.2: ಲೋಕಸಭಾ ಚುನಾವಣೆ ಮತ‌ ಎಣಿಕೆ ದಿನ ಸಮೀಪಿಸುತ್ತಿರುವಂತೆ ಫುಲ್ ಆ್ಯಕ್ಟೀವ್ ಆಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ದೇವಸ್ಥಾನಗಳನ್ನು ಸುತ್ತಿ ಮತ ಎಣಿಕೆ ಕೇಂದ್ರದ ಏಜೆಂಟರ ಗುರುತಿನ ಚೀಟಿಗಳಿಗೂ ಪೂಜೆ ಮಾಡಿಸಿದರು.

ಇಂದು ಬೆಳಿಗ್ಗೆಯಿಂದ ಟೆಂಪಲ್ ರನ್‌ ‌ನಲ್ಲಿ ತೊಡಗಿದ ಎಚ್.ಡಿ‌.ರೇವಣ್ಣ, ಹರದನಹಳ್ಳಿಯ ದೇವೇಶ್ವರ, ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ನಂತರ ಹರದನಹಳ್ಳಿ ಮನೆಯಲ್ಲಿ ಜೆಡಿಎಸ್ ಪ್ರಮುಖರ ಸಭೆ ನಡೆಸಿ, ಮತ ಎಣಿಕೆ ಕೇಂದ್ರಕ್ಕೆ ತೆರಳುವ ಏಜೆಂಟರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು.

ನಂತರ ಮಾವಿನಕೆರೆಯ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಜತೆಗೆ ಮುಚ್ಚಿದ ಲಕೋಟೆಯಲ್ಲಿ ಏಜೆಂಟರ ಗುರುತಿನ ಚೀಟಿಗಳನ್ನು ಅರ್ಚಕರಿಗೆ ನೀಡಿ ಪೂಜೆ ಮಾಡಿಸಿದರು.

ಹಾಸನ ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್ ಕೂಡಾ ಜತೆಯಲ್ಲಿದ್ದರು.


Share this with Friends

Related Post