Mon. Dec 23rd, 2024

ರಾಜೀವ್ ಕೋಟಿ ವೃಕ್ಷ ಆಂದೋಲನ ಮಾಡುತ್ತಾರೆ – ಎಂ ಲಕ್ಷ್ಮಣ್ ಶ್ಲಾಘನೆ

Share this with Friends

ಮೈಸೂರು: ‌ಮೈಸೂರಲ್ಲಿ ಮಾತ್ರವಲ್ಲ ಕರ್ನಾಟಕದ ಯಾವ ರಾಜಕಾರಣಿಯೂ ಮಾಡದ ಕೆಲಸವನ್ನು ಹೆಚ್ ವಿ ರಾಜೀವ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಎಂ.ಲಕ್ಷ್ಮಣ್ ಶ್ಲಾಘಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಹೆಚ್.ವಿ. ರಾಜೀವ್ ಅವರ ಹುಟ್ಟುಹಬ್ಬದ ಪ್ರಯುಕ್ತ ರಾಜೀವ್ ಸ್ನೇಹ ಬಳಗ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಎಂ ಲಕ್ಷ್ಮಣ್ ಮಾತನಾಡಿ,ಪರಿಸರ ಪ್ರೇಮವನ್ನು ಕೊಂಡಾಡಿದರು.

ಪರಿಸರ ಎಂದರೆ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಬಾರದು ಎಂಬ ಉದ್ದೇಶದಿಂದ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೂ ಕೂಡ ಗಿಡಗಳನ್ನು ರಾಜೀವ್ ಹಂಚುತ್ತಿದ್ದಾರೆ, ಈಗಾಗಲೇ ಲಕ್ಷ ವೃಕ್ಷ ಆಂದೋಲನ ಮಾಡಿದ ರಾಜೀವ್ ರವರು ಕೋಟಿ ವೃಕ್ಷ ಆಂದೋಲನವನ್ನು ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೂಜ್ಯ ಇಳೈ ಅಳ್ವಾರ್ ಸ್ವಾಮೀಜಿ ಆಶೀರ್ವದಿಸಿ ಮಾತನಾಡಿ, ಕೆಲವು ಬಾರಿ ಭಗವಂತ ಕೆಲವು ಉದ್ದೇಶಗಳಿಗಾಗಿ ಭೂಮಿಯ ಮೇಲೆ ಕೆಲವು ವ್ಯಕ್ತಿಗಳನ್ನು ಸೃಷ್ಟಿ ಮಾಡುತ್ತಾನೆ ಹಾಗೆ ಸಮಾಜಕ್ಕೆ ಕೊಡುಗೆ ನೀಡುವುದಕ್ಕಾಗಿಯೇ ರಾಜೀವ್ ಬಂದಿದ್ದಾರೆ ಎಂಬುದು ನಮ್ಮ ನಂಬಿಕೆ ಎಂದು ತಿಳಿಸಿದರು.

ನಿಜಕ್ಕೂ ರಾಜೀವ್ ಮಾಡುತ್ತಿರುವ ಕಾರ್ಯ ಅತ್ಯಂತ ಪುಣ್ಯದ ಕಾರ್ಯ ಇಂತಹ ಕಾರ್ಯದಲ್ಲಿ ತೊಡಗಿರುವ ರಾಜೀವ ಸ್ನೇಹ ಬಳಗದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು

ಈ ಸಂದರ್ಭದಲ್ಲಿ ಮಾಜಿ ಮೇಯರ್ ಭೈರಪ್ಪ, ಕೆ.ವಿ ಮಲ್ಲೇಶ್, ಹಿರಿಯ ಸಮಾಜ ಸೇವಕ ರಘುರಾಮ್ ವಾಜುಪೇಯಿ, ಶೇಷಪ್ರಸಾದ್, ನಾಗೇಶ್,ಟಿಂಬರ್ ನಾಗರಾಜ್,ಮುರಳಿ,ಹುಡ್ಕೋ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post