Sat. Dec 28th, 2024

ಮೈಸೂರು ಅರಮನೆಯಲ್ಲಿ‌ ಸಂಭ್ರಮ:ಎರಡನೆ ಮಗುವಿಗೆ ಜನ್ಮ ನೀಡಿದ ತ್ರಿಶಿಕಾ

Share this with Friends

ಮೈಸೂರು: ಮೈಸೂರು ಅರಮನೆಯಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ.

ಯದುವಂಶಕ್ಕೆ ಹೊಸ ಸದಸ್ಯ ಸೇರ್ಪಡೆಯಾಗಿರುವುದೇ ಈ ಸಡಗರಕ್ಕೆ ಕಾರಣ.

ಯದುವಂಶದ ರಾಣಿ ತ್ರಿಷಿಕಾ ಅವರು ಮೈಸೂರಿನ ಯಾದವಗಿರಿಯಲ್ಲಿರುವ ಮದರ್ ಹುಡ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಬೆಂಗಳೂರಿನ ವೈದ್ಯರ ತಂಡ ಮೈಸೂರಿನ ವೈದ್ಯರ ತಂಡದ ನೆರವು ಪಡೆದು ಹೆರಿಗೆ ಪ್ರಕ್ರಿಯೆ ಯಶಸ್ವಿಗೊಳಿಸಿದ್ದಾರೆ.

ಆದ್ಯವೀರ್ ಗೆ ಸಹೋದರ ಪ್ರಾಪ್ತಿಯಾಗಿದೆ‌,ಒಂದೆಡೆ ಅರಮನೆಯಲ್ಲಿ ಸಂಭ್ರಮದ ವಾತಾವರಣ ಇದೆ.ಮತ್ತೊಂದೆಡೆ ಮಗು ಜನಿಸಿದ ಸೂತಕ ಹಿನ್ನಲೆ ಪೂಜಾ ಕೈಂಕರ್ಯಗಳಿಗೆ ಅಡ್ಡಿಯಾಗಲಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.

ಈಗಾಗಲೇ ಯದುವೀರ್ ರವರು ಕಂಕಣ ತೊಟ್ಟಿದ್ದಾರೆ.ಮಗು ಹುಟ್ಟಿದಾಗ ಸಂಪ್ರದಾಯವಾಗಿ ಸೂತಕ ಆಚರಿಸುವ ವಾಡಿಕೆ ಇದೆ.

ಆದರೆ ಯದುವೀರ್ ಕಂಕಣ ತೊಟ್ಟಾಗಿರುವುದರಿಂದ ಅವರಿಗೆ ಮಾತ್ರ ಯಾವುದೇ ಸೂತಕ ತಟ್ಟುವುದಿಲ್ಲ ಎಂದು ತಿಳಿದವರು ಹೇಳುತ್ತಾರೆ.

ಇಂದು ನವರಾತ್ರಿ ಸಂಪನ್ನಗೊಳ್ಳಲಿದೆ.ನಂತರವಷ್ಟೇ ಯದುವೀರ್ ಅರಮನೆಯಿಂದ ಹೊರಬರಬೇಕಿದೆ.


Share this with Friends

Related Post