Mon. Dec 23rd, 2024

ಬಿಜೆಪಿ ರಾಜ್ಯ ರೈತ ಮೋರ್ಚಾ ಖ‌ಜಾಂಚಿಯಾಗಿ ಹರೀಶ್ ಬಾಬು ನೇಮಕ

Share this with Friends

ಬೆಂಗಳೂರು, ಫೆ.8: ಬಿಜೆಪಿ ರೈತ ಮೋರ್ಚಾ ರಾಜ್ಯ ಖಜಾಂಚಿಯಾಗಿ ಹರೀಶ್ ಬಾಬು ಅವರನ್ನು ನೇಮಕ ಮಾಡಲಾಗಿದೆ.ಪಕ್ಷದ ಕಚೇರಿಯಲ್ಲಿ ರೈತ ಮೋರ್ಚಾದ ರಾಜ್ಯ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಅವರು ಹರೀಶ್ ಬಾಬು ಅವರಿಗೆ ನೇಮಕಾತಿ ಪತ್ರ ನೀಡಿದರು.

ಖಜಾಂಚಿಯಾಗಿ ತಮ್ಮ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ ಪಕ್ಷವನ್ನು ತಳಮಟ್ಟದಿಂದ ಸಧೃಢಗೊಳಿಸಲು ಶ್ರಮಿಸಬೇಕೆಂದು ನಡಹಳ್ಳಿ ಸಲಹೆ ನೀಡಿದರು.

ಮುಂದಿನ ಎಲ್ಲ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬಿ ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಹರೀಶ್‌ ಬಾಬು ಕಾರ್ಯ ಪ್ರವೃತ್ತರಾಗಲಿ ಎ.ಎಸ್. ಪಾಟೀಲ್ ನಡಹಳ್ಳಿ ಹಾರೈಸಿದರು. ಈ ವೇಳೆ ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ನವೀನ್ ಕುಮಾರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.


Share this with Friends

Related Post