Wed. Jan 8th, 2025

ಜಾತಿಗಣತಿ ವರದಿ ಮರು ಪರಿಶೀಲನೆಗೆಹೆಚ್.ಡಿ. ಕೆ ಅಭಿಮಾನಿಗಳ ಬಳಗ ಒತ್ತಾಯ

Share this with Friends

ಮೈಸೂರು: ರಾಜ್ಯ ಸರ್ಕಾರ ಜಾರಿಮಾಡಲು ಹೊರಟಿರುವ ಜಾತಿಗಣತಿ ವರದಿಯನ್ನು ವಿರೋಧಿಸಿ ಹೆಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಬಳಗದ‌ ವತಿಯಿಂದ ಜಿಲ್ಲಾಧಿಕಾರಿ‌ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ಹೆಚ್ ಡಿ ಕುಮಾರ ಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಸಂಸ್ಥಾಪಕ ಜಿಲ್ಲಾಧ್ಯಕ್ಷರಾದ ರಾಮಕೃಷ್ಣೇಗೌಡ, ನಗರ ಅಧ್ಯಕ್ಷ ಕೆ ಆರ್ ಮಿಲ್ ಆನಂದ್ ಗೌಡ, ನಗರ ಘಟಕದ ಅಧ್ಯಕ್ಷೆ ಬಾಬಿತಾ, ಖಜಾಂಚಿ ಪ್ರಸನ್ನ ಗೌಡ ನೇತೃತ್ವದಲ್ಲಿ ಸಹಾಯಕ ಜಿಲ್ಲಾಧಿಕಾರಿ ಶಿವ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು.

ಸರ್ಕಾರ ಜಾರಿ ಮಾಡಲು ಹೊರಟಿರುವ ಜಾತಿಗಣತಿಯ ವರದಿಯು ಅವೈಜ್ಞಾನಿಕವಾಗಿದ್ದು, ವರದಿಯಲ್ಲಿ ಎಲ್ಲಾ ಜಾತಿಗಳ ಜನರನ್ನು ಭೇಟಿ ಮಾಡದೇ ವರದಿಯನ್ನು ತಯಾರಿಸಲಾಗಿದೆ ಎಂದು ಸಂಘದವರು ದೂರಿದರು.

ಕೂಡಲೇ ಇದನ್ನು ಪರಿಶೀಲಿಸಿ ಮರು ಗಣತಿಯನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.


Share this with Friends

Related Post