ಮೈಸೂರು,ಮಾ.26: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಹೃದಯ ಶಸ್ತ್ರಚಿಕಿತ್ಸೆ ಮುಗಿಸಿ ಆರೋಗ್ಯವಾಗಿ ಹಿಂದಿರುಗಿದಕ್ಕೆ ಅಭಿಮಾನಿಗಳು ದೇವರಿಗೆ ಹರಕೆ ತೀರಿಸಿದ್ದಾರೆ.
ಎಚ್. ಡಿ ಕುಮಾರಸ್ವಾಮಿ ಅಭಿಮಾನಿಗಳ ಬಳಗದ ವತಿಯಿಂದ ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿ ಸನ್ನಿಧಿಯಲ್ಲಿ
101 ತೆಂಗಿನಕಾಯಿ ಈಡುಗಾಯಿ ಹೊಡೆಯುವ ಮೂಲಕ ಹರಕೆ ತೀರಿಸಿದ್ದಾರೆ.
ಎಚ್. ಡಿ ಕುಮಾರಸ್ವಾಮಿ ಅವರಿಗೆ ಹೃದಯದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲೆಂದು ವೆಂಕಟರಮಣ ಸ್ವಾಮಿ ಸನ್ನಿಧಿಯಲ್ಲಿ 101 ತೆಂಗಿನಕಾಯಿಯನ್ನು ಹೊಡೆದು ಪೂಜೆ ಸಲ್ಲಿಸುತ್ತೇವೆ ಎಂದು ಬಳಗದ ಸದಸ್ಯರು ಹರಕೆ ಹೊತ್ತಿದ್ದರು.
ಅದರಂತೆ ಎಚ್ ಡಿ ಕುಮಾರಸ್ವಾಮಿ ಅಭಿಮಾನಿ ಬಳಗದ ಗೌರವಾಧ್ಯಕ್ಷರು ಹಾಗೂ ನಗರಪಾಲಿಕೆ ಸದಸ್ಯರಾದ ಎಸ್ ಬಿ ಎಂ ಮಂಜಣ್ಣ ಅವರ ಅಧ್ಯಕ್ಷತೆಯಲ್ಲಿ ಎನ್.ಆರ್. ಕ್ಷೇತ್ರದ ಮೈಸೂರ್ ನಗರ ಸಂಘಟನಾ ಕಾರ್ಯದರ್ಶಿ ಉರುಳು ಸೆವೇ ನಾಗರಾಜು ಅವರು 101 ಈಡುಗಾಯಿ ಹೊಡೆದು ವೆಂಕಟರಮಣನಿಗೆ ಪೂಜೆ ಸಲ್ಲಿಸುವ ಮುಖಾಂತರ ಹರಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಮಕೃಷ್ಣಗೌಡರು ಬೆಲವತ್ತ ಹಾಗೂ ನಗರಾಧ್ಯಕ್ಷ ಕೆ.ಆರ್ ಮಿಲ್ ಆನಂದ್ ಗೌಡ್ರು, ನಗರ ಪ್ರಧಾನ ಕಾರ್ಯದರ್ಶಿ ಬೆಲವತ್ತ ಸತೀಶ್ ಗೌಡ್ರು, ನಗರ ಸಂಘಟನಾ ಕಾರ್ಯದರ್ಶಿ ಕೋದಂಡರಾಮ ಬೊಂಬು ಬಜಾರ್ ಮೆದರ್ ಬ್ಲಾಕ್, ಖಜಾಂಚಿ ಪ್ರಸನ್ನಗೌಡ್ರು, ಬೆಲವತ್ತ ಮಹಿಳಾ ಘಟಕದ ನಗರ ಅಧ್ಯಕ್ಷೆ ಬಬಿತ, ಎಚ್ ಡಿ ಕೆ ಬಳಗದ ರತ್ನ ಮತ್ತಿತರರು ಹಾಜರಿದ್ದರು.