Wed. Dec 25th, 2024

ನಾಳೆ ಮಳೆ ಅನಾಹುತ ಪ್ರದೇಶಗಳಿಗೆ ಹೆಚ್ ಡಿ ಕೆ ಭೇಟಿ

Share this with Friends

ಹುಬ್ಬಳ್ಳಿ,ಜು.20: ರಾಜ್ಯದ ‌ಬಹುತೇಕ ಕಡೆಗಳಲ್ಲಿ ಮಳೆ ಅನಾಹುತಗಳಾಗಿದ್ದು,ನಾಳೆ ಆ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ‌ ಹೆಚ್ ಡಿ ಕೆ ಮಾತನಾಡಿದರು.

ದಕ್ಷಿಣ ಕನ್ನಡ,ಉತ್ತರ ಕನ್ನಡ ಜಿಲ್ಲೆಗಳು,ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುಡ್ಡ ಕುಸಿತದಿಂದ ಸಾವುನೋವುಗಳಾಗಿವೆ,
ಆದ್ದರಿಂದ ಅಲ್ಲಿನ ಸ್ಥಿತಿ ಅವಲೋಕಿಸಲು ನಾಳೆ ಭೇಟಿ ನೀಡುತ್ತೇನೆ ಮತ್ತು ಅಲ್ಲಿನ ಜನರಿಗೆ ದೈರ್ಯ ತುಂಬುತ್ತೇನೆ ಎಂದು ತಿಳಿಸಿದರು.

ಕೆಲವು ಪ್ರದೇಶಗಳಲ್ಲಿ ಭೂಮಿ ನೀರಲ್ಲಿ ಮುಳುಗಿವೆ,ಮನೆಗಳು ಬಿದ್ದಿವೆ ಆದರೆ ರಾಜ್ಯದ ಕಂದಾಯ ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಇದು ಎಷ್ಟರ ಮಟ್ಟಿಗೆ ಸರಿ ಎಂದು ಕುಮಾರಸ್ವಾಮಿ ಟೀಕಿಸಿದರು.

ಈ ಸಂದರ್ಭದಲ್ಲಿ ಸಿಎಂ ಮತ್ತು ಸಚಿವರು ಹಾನಿಗೊಳಗಾದ ಸ್ಥಳಗಳಿಗೆ ಕುದ್ದು ಭೇಟಿ ನೀಡಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.


Share this with Friends

Related Post