ಬಾಗಲಕೋಟ,ಜು.21: ಹೆಸ್ಕಾಂ ನೌಕರ ಟ್ರಾನ್ಸ್ ಫಾರ್ಮರ್ ಏರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆಯ ನವನಗರ 51ನೇ ಸೆಕ್ಟರ್ ನ ಹೆಸ್ಕಾಂ ನೌಕರ ಪರಶು ಮಾಸ್ತಿ(35) ಟ್ರಾನ್ಸ್ ಫಾರ್ಮರ್ ಹತ್ತಿ ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪರಶು ಮಾಸ್ತಿ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಟ್ರಾನ್ಸ್ ಫಾರ್ಮರ್ ಮೇಲೆ ಆತನ ದೇಹ ಸುಟ್ಟು ಕರಕಲಾಗಿದೆ.
ಸ್ಥಳಕ್ಕೆ ಪೊಲಿಸರು ಧಾವಿಸಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.