Sat. Nov 2nd, 2024

ಹಿಂದೂಗಳ ಮೇಲೆ ದಾಳಿ ಖಂಡಿಸಿ ಹಿಂದೂ ಹಿತರಕ್ಷಣ ಸಮಿತಿ ಪ್ರತಿಭಟನೆ

Share this with Friends

ಮೈಸೂರು, ಆ.12: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿ ಮೈಸೂರಿನ ವಿವಿಧೆಡೆ ಹಿಂದೂ ಹಿತರಕ್ಷಣ ಸಮಿತಿ ವತಿಯಿಂದ ಪ್ರತಿಭಟನೆ ಮಾಡಲಾಯಿತು.

ಚಾಮುಂಡಿಪುರ ವೃತ್ತ, ವೇದಾಂತ ಹೆಮ್ಮಿಗೆ ವೃತ್ತ, ರಾಮಸ್ವಾಮಿ ವೃತ್ತ, ಗನ್ ಹೌಸ್ ವೃತ್ತ, ನ್ಯಾಯಾಲಯದ ಮುಂಭಾಗ ಸೇರಿದಂತೆ ನಗರದ ಪ್ರಮುಖ 30 ವೃತದಲ್ಲಿ ಬಿತ್ತಿ ಪತ್ರ ಪ್ರದೇಶಸಿ ಮೌನ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಹಿಂದೂ ಹಿತರಕ್ಷಣ ಸಮಿತಿಯ ಸಂಚಾಲಕ ರಂಗಸ್ವಾಮಿ,
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ಮೂಲಭೂತವಾದಿಗಳು ಮಾಡುತ್ತಿರುವ ಹಿಂಸಾಚಾರ ಖಂಡನೀಯ ಎಂದು ಹೇಳಿದರು.

ಬಾಂಗ್ಲಾದಲ್ಲಿ ಅರಾಜಕತೆ ಉಂಟಾಗಿದ್ದು, ಹಿಂದೂಗಳ ಮನೆ, ಅಂಗಡಿ, ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಅತ್ಯಾಚಾರ, ಹತ್ಯೆ, ಆಸ್ತಿನಾಶದಂತಹ ಅಮಾನವೀಯ ಕೃತ್ಯ ಎಸಗಲಾಗುತ್ತಿದೆ, ಅಲ್ಲಿನ ಸೇನೆ ಇದನ್ನು ತಡೆಯಲು ಕ್ರಮ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದೂ ಹಿತರಕ್ಷಣ ಸಮಿತಿಯ ಸಂಚಾಲಕರಾದ ಮಹೇಶ್, ರಂಗಸ್ವಾಮಿ, ಗಿರೀಶ್, ಸಂತೋಷ್, ವಿಕ್ರಂ ಅಯ್ಯಂಗಾರ್, ಚಂದ್ರು ಕುಮಾರ್, ಬೈರತಿ ಲಿಂಗರಾಜು, ಶ್ರೀನಿವಾಸ್, ಎಸ್ ಎನ್ ರಾಜೇಶ್ ಹಾಗೂ ಹಿಂದು ಮುಖಂಡರು ಭಾಗವಹಿಸಿದ್ದರು.


Share this with Friends

Related Post