Mon. Dec 23rd, 2024

ಕೆನಡಾದ ಎಡ್ಮಂಟನ್ ನಲ್ಲಿ ಹಿಂದೂ ದೇವಾಲಯ‌ ವಿರೂಪ

Share this with Friends

ಕೆನಡಾ,ಜು.23: ಕೆನಡಾದ ಎಡ್ಮಂಟನ್ ನಲ್ಲಿ ಹಿಂದೂ ದೇವಾಲಯವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದು,ಭಾರತೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ದೇವಾಲಯದ ಗೋಡೆಗಳ ಮೇಲೆ ಗೀಚುಬರಹ ಕೂಡಾ ಇದೆ.ಈ ಘಟನೆಯನ್ನು ಕೆನಡಾದ ವಿಶ್ವ ಹಿಂದೂ ಪರಿಷತ್ ಖಂಡಿಸಿದ್ದು ಉಗ್ರಗಾಮಿ ಸಿದ್ಧಾಂತದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆನಡಾ ಸರ್ಕಾರಕ್ಕೆ ಮನವಿ ಮಾಡಿದೆ.

ನಮ್ಮ ದೇಶದಲ್ಲಿ ಶಾಂತಿಪ್ರಿಯ ಹಿಂದೂ ಸಮುದಾಯದ ವಿರುದ್ಧ ದ್ವೇಷವನ್ನು ಪ್ರಚೋದಿಸುವ ಉಗ್ರಗಾಮಿ ಸಿದ್ಧಾಂತದ ವಿರುದ್ಧ ನಿರ್ಣಾಯಕವಾಗಿ ಕಾರ್ಯನಿರ್ವಹಿಸುವಂತೆ ನಾವು ಕೆನಡಾ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ವಿ ಹೆಚ್ ಪಿ ಎಸ್‌ ನಲ್ಲಿ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ದೇವಾಲಯವನ್ನು ಇಂತಹ ಗೀಚುಬರಹದಿಂದ ವಿರೂಪಗೊಳಿಸುತ್ತಿರುವುದು ಇದು ಮೊದಲಲ್ಲ,ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ನಂತರ ಆತನ ಬೆಂಬಲಿಗರು ಭಾರತ ವಿರೋಧಿ ಚಟುವಟಿಕೆಗಳನ್ನು ಇಮ್ಮಡಿ ಗೊಳಿಸಿದ್ದಾರೆ.


Share this with Friends

Related Post