Fri. Apr 11th, 2025

ಮನೆಗೆ ನುಗ್ಗಿ ಮಹಿಳೆ ಅಪಹರಣ:ಕೆಲವೇ‌ ಗಂಟೆಗಳಲ್ಲಿ ರಕ್ಷಣೆ

Share this with Friends

ಮೈಸೂರು,ಏ.24: ಮಹಿಳೆಗೆ ಮಹಿಳೆಯೇ ಶತೃ ಎಂಬ ಮಾತಿದೆ,ಅದರಂತೆ ಗೃಹಿಣಿಯ ಅಪಹರಣದಲ್ಲಿ ಮಹಿಳೆಯೊಬ್ಬಳು ಶಾಮೀಲಾಗಿರುವ ಪ್ರಕರಣ ನಗರದಲ್ಲಿ ನಡೆದಿದೆ.

ಮಹಿಳೆ ಸೇರಿದಂತೆ 6 ಮಂದಿ ತಂಡವೊಂದು ಮನೆಗೆ ನುಗ್ಗಿ ಗೃಹಿಣಿಯನ್ನ ಬಲವಂತವಾಗಿ ಎಳೆದೊಯ್ದ ಘಟನೆ ಮೈಸೂರಿನ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯ ಎಜೆ ಬ್ಲಾಕ್ ನಲ್ಲಿ ನಡೆದಿದೆ.

ಮಕ್ಕಳ ಮುಂದೆಯೇ ತಾಯಿ ಸವಿತಾ(42)
ಎಂಬವರನ್ನು
ದುಷ್ಕರ್ಮಿಗಳು ಅಪಹರಿಸಿದ್ದಾರೆ‌.

ಏ.21 ರಂದು ಘಟನೆ ನಡೆದಿದ್ದು ಎನ್.ಆರ್.ಠಾಣಾ ಪೊಲೀಸರು ತಕ್ಷಣ ಕಾರ್ಯಾಚರಣೆಗಿಳಿದು ಮಹಿಳೆಯನ್ನ ರಕ್ಷಿಸಿದ್ದಾರೆ.

ಏ21 ರ ರಾತ್ರಿ ಮನೆಗೆ ನುಗ್ಗಿದ 6 ಮಂದಿ ಮನೋಜ್ ನ ಎಲ್ಲಿ ಇರಿಸಿದ್ದೀಯ ಎಂದು ಪ್ರಶ್ನಿಸಿ ಸವಿತಾ ಅವರನ್ನು ಹಿಡಿದು ಎಳೆದಾಡಿದ್ದಾರೆ.

ಬಿಡಿಸಲು ಬಂದ ಮಗ ಶಶಾಂಕ್ ಮೇಲೆ ಹಲ್ಲೆ ನಡೆಸಿದ್ದಾರೆ.ನಂತರ ಮಗಳು ಅರುಣ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನ ಕಸಿದಿದ್ದಾರೆ.ಸವಿತಾರನ್ನ ಡಸ್ಟರ್ ಕಾರಿನಲ್ಲಿ ಹಾಕಿಕೊಂಡು ಹೋಗಿದ್ದಾರೆ.

ಈ ಸಂಭಂಧ ಶಶಾಂಕ್ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಸವಿತಾರನ್ನ ರಕ್ಷಿಸಿ ಘಟನೆ ಸಂಭಂಧ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.


Share this with Friends

Related Post