Tue. Dec 24th, 2024

ಹಾಸನದಲ್ಲಿ ಭೀಕರ ಅಪಘಾತ:ಆರು ಮಂದಿ ದುರ್ಮರಣ

Share this with Friends

ಹಾಸನ,ಮೇ.26: ಟೊಯೋಟಾ ಇಟಿಯೋಸ್ ಕಾರು ಮತ್ತು ಕಂಟೇನರ್ ವಾಹನ ನಡುವೆ ಭೀಕರ ಅಪಘಾತ‌ ಸಂಭವಿಸಿ ಆರು ಮಂದಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಹಾಸನದಲ್ಲಿ ನಡೆದಿದೆ.

ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಕಂದಲಿ ಸಮೀಪ ಇಂದು ಮುಂಜಾನೆ 6.30 ರ ಸಮಯದಲ್ಲಿ ಈ ದುರ್ಘಟನೆ ನಡೆದಿದೆ.

ಇಬ್ಬರು ಮಹಿಳೆಯರು, ಮೂರು ಪುರುಷರು, ಒಂದು ಮಗು ಸೇರಿ ಆರು ಮಂದಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ ಅಪಘಾತದ ಭೀಕರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಒಂದೇ ಕುಟುಂಬದ ನಾರಾಯಣ ಸ್ವಾಮಿ(50), ಸುನಂದಾ(40), ರವಿಕುಮಾರ್(30), ನೇತ್ರ(25),
ಚೇತನ್ (7), ಗುಣಶೇಖರ್(28) (ಡ್ರೈವರ್) ಮೃತಪಟ್ಟ ದುರ್ದೈವಿಗಳು.

ಮೃತರು ಚಿಕ್ಕಬಳ್ಳಾಪುರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ, ಅಂದರಹಳ್ಳಿ ಹಾಗೂ ದೇವನಹಳ್ಳಿ ಬಳಿಯ ಕಾರಹಳ್ಳಿ ಮೂಲದವರು.

ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಲು KA-53-C.1419 ನಂಬರ್‌ನ ಇಟಿಯೋಸ್ ಕಾರಿನಲ್ಲಿ ಹೋಗಿ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಬೆಳಗಿನ ಜಾವ ನಿದ್ದೆ ಮಂಪರಿನಲ್ಲಿ ವಾಹನ ಡಿವೈಡರ್ ಗೆ ಡಿಕ್ಕಿ ಹೊಡೆದು ಪಕ್ಕದ ಲೇನ್ ಗೆ ಹಾರಿ ಕಂಟೇನರ್‌ಗೆ ಗುದ್ದಿದೆ.

ಕಾರು ನುಜ್ಜುಗುಜ್ಜಾಗಿದ್ದರಿಂದ ಒಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆಯಲು ಹಾಸನ ಪೊಲೀಸರು ಹರಸಾಹಸ ಪಡಬೇಕಾಯಿತು.

ಹಾಸನ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡರು.


Share this with Friends

Related Post